Home ತಾಜಾ ಸುದ್ದಿ ಎಚ್‌ಡಿಕೆಗೆ ಲೋಕಾಯುಕ್ತ ನೋಟಿಸ್?

ಎಚ್‌ಡಿಕೆಗೆ ಲೋಕಾಯುಕ್ತ ನೋಟಿಸ್?

0

ಬೆಂಗಳೂರು: ಗಂಗೇನಹಳ್ಳಿ ಡಿನೋಟಿಫಿಕೇಶನ್ ಹಗರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರು ಕೇಂದ್ರ ಉಕ್ಕು ಹಾಗೂ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ನೋಟಿಸ್ ನೀಡಿದ್ದಾರೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. ಆದರೆ ಈ ನೋಟಿಸ್ ಪ್ರತಿಯನ್ನು ಪಡೆಯಲು ಕುಮಾರಸ್ವಾಮಿ ನಿರಾಕರಿಸಿದ್ದಾರೆ ಎಂದು ಹೇಳಲಾಗಿದೆ.
ಈಗಾಗಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ವಿಚಾರಣೆಗೆ ಒಳಪಡಿಸಿರುವ ಲೋಕಾಯುಕ್ತ ಪೊಲೀಸರು ಈಗ ಕುಮಾರಸ್ವಾಮಿ ಅವರಿಗೆ ಬುಲಾವ್ ನೀಡಿದ್ದಾರೆ ಎನ್ನಲಾಗಿದೆ.
ಡಿವೈಎಸ್‌ಪಿ ದರ್ಜೆಯ ಅಧಿಕಾರಿಯೊಬ್ಬರು ನೋಟಿಸ್ ಕೊಡಲು ತೆರಳಿದ್ದಾಗ ಅದನ್ನು ಪಡೆಯಲು ಕುಮಾರಸ್ವಾಮಿ ನಿರಾಕರಿಸಿದ ಬಳಿಕ ಐಪಿಎಸ್ ದರ್ಜೆಯ ಅಧಿಕಾರಿಯೊಬ್ಬರು ಕರೆ ಮಾಡಿ, ನೋಟಿಸ್ ಪಡೆಯಲು ಮನವಿ ಮಾಡಿದರು ಎನ್ನಲಾಗಿದೆ. ಆದರೆ ಇದಕ್ಕೆ ಕುಮಾರಸ್ವಾಮಿ ಸೊಪ್ಪು ಹಾಕಲಿಲ್ಲ ಎಂದು ಮೂಲಗಳು ತಿಳಿಸಿವೆ.

Exit mobile version