Home ತಾಜಾ ಸುದ್ದಿ ಉಘೇ ಉಘೇ ಎಂದ ಬಘೀರ

ಉಘೇ ಉಘೇ ಎಂದ ಬಘೀರ

0

ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಘೀರ ಚಿತ್ರದ ಮೊದಲ ಗೀತೆ ಬಿಡುಗಡೆ ಆಗಿದೆ.
ಇಂದು ಬಿಡುಗಡೆಯಾದ ಮೊದಲ ಹಾಡು ರುಧಿರ ಧಾರಾ ಉಘೇ ಉಘೇ ಹಾಡಿಗೆ ಅನಿರುದ್ಧ್‌ ಶಾಸ್ತ್ರಿ ಸಾಹಿತ್ಯ ಬರೆದು ಸಂಗಡಿಗರೊಂದಿಗೆ ಹಾಡಿದ್ದಾರೆ. ಬಘೀರ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು. ಎ.ಜೆ.ಶೆಟ್ಟಿ ಕ್ಯಾಮರಾವರ್ಕ್ ಮಾಡಿದ್ದಾರೆ. ಡಾಕ್ಟರ್ ಸೂರಿ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ ಅಡಿ ಈ ಚಿತ್ರ ನಿರ್ಮಾಣ ಆಗಿದ್ದು, ಹಾಡು ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ರಿಲೀಸ್‌ ಆಗಿದೆ. ಬಘೀರ ಶ್ರೀಮುರಳಿ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. 2021 ರಲ್ಲಿ ಈ ಸಿನಿಮಾ ಅನೌನ್ಸ್‌ ಮಾಡಲಾಗಿತ್ತು. ಅಕ್ಟೋಬರ್‌ 21 ರಂದು ಸಿನಿಮಾದ ಟ್ರೈಲರ್‌ ರಿಲೀಸ್‌ ಆಗಲಿದ್ದು, ಬಘೀರ ಸಿನಾಮ ಅಕ್ಟೋಬರ್‌ 31 ರಂದು ತೆರೆಗೆ ಬರಲಿದೆ.

ಅಲ್ಲಯವರೆಗೆ ರುಧಿರ ಧಾರಾ ಉಘೇ ಉಘೇ ಹಾಡನ್ನು ಕೇಳಿ…


Exit mobile version