Home News ಈಜಲು ಹೋಗಿ ನೀರು ಪಾಲಾದ ಬಾಲಕ

ಈಜಲು ಹೋಗಿ ನೀರು ಪಾಲಾದ ಬಾಲಕ

ಹಿರೇಕೆರೂರ: ಕೆರೆಯಲ್ಲಿ ಈಜಲು ಹೋಗಿದ್ದ ಮೂರನೇ ತರಗತಿ ವಿದ್ಯಾರ್ಥಿಯೋರ್ವ ನೀರು ಪಾಲಾಗಿ ಮೃತಪಟ್ಟಿರುವ ಘಟನೆ ತಾಲೂಕಿನ ಕಳಗೊಂಡ ಗ್ರಾಮದಲ್ಲಿ ಸಂಭವಿಸಿದೆ.
ಗ್ರಾಮದ ಗಜೇಂದ್ರ ಜಗದೀಶ ದೊಡ್ಡಮನಿ(9) ಮೃತಪಟ್ಟಿರುವ ದುರ್ದೈವಿ. ಈತ ಪಕ್ಕದ ನೂಲಗೇರಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 3ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದ. ಶಾಲೆಗಳು ರಜೆ ಇರುವುದರಿಂದ ಕೆರೆಯಲ್ಲಿ ಈಜಲು ಹೋಗಿ ನೀರು ಪಾಲಾಗಿದ್ದಾನೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Exit mobile version