Home ತಾಜಾ ಸುದ್ದಿ ‘ಇದು AI ಜಗತ್ತಲ್ಲ. ಇದು UI ಜಗತ್ತು’ : UI ಚಿತ್ರದ ಟೀಸರ್ ಬಿಡುಗಡೆ

‘ಇದು AI ಜಗತ್ತಲ್ಲ. ಇದು UI ಜಗತ್ತು’ : UI ಚಿತ್ರದ ಟೀಸರ್ ಬಿಡುಗಡೆ

0

ಬೆಂಗಳೂರು: ನಟ ಉಪೇಂದ್ರ ನಿರ್ದೇಶಿಸಿ, ನಟಿಸುತ್ತಿರುವ ಯುಐ ಸಿನಿಮಾದ ಟೀಸರ್ ರಿಲೀಸ್ ಆಗಿದೆ.
8 ವರ್ಷಗಳ ಬಳಿಕ ‘ಉಪ್ಪಿ’ ಡೈರೆಕ್ಷನ್ ಮಾಡುತ್ತಿದ್ದು, ಕೆ.ಪಿ. ಶ್ರೀಕಾಂತ್, ನವೀನ್ ಮನೋಹರನ್ ಹಾಗೂ ಲಹರಿ ಫಿಲಂಸ್ ನಿರ್ಮಾಣದಲ್ಲಿ ಚಿತ್ರ ಮೂಡಿ ಬಂದಿದೆ. ಈ ಚಿತ್ರದ ಟೀಸರ್​ ಅನ್ನು ಶಿವರಾಜ್​ಕುಮಾರ್ ರಿಲೀಸ್ ಮಾಡಿದ್ದಾರೆ. ಟಾಲಿವುಡ್ ನಿರ್ಮಾಪಕ ಅಲ್ಲು ಅರವಿಂದ್ ಕೂಡ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟರ್(ಎಕ್ಸ್‌)​ನಲ್ಲಿ ನಟ ಸುದೀಪ್ ಟೀಸರ್ ಬಿಡುಗಡೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ಸಾಧು ಕೋಕಿಲ ಹಾಗೂ ರವಿ ಶಂಕರ್ ಪಾತ್ರಗಳು ಕೂಡ ಗಮನ ಸೆಳೆದಿವೆ. ‘ಇದು ಎಐ ಜಗತ್ತಲ್ಲ. ಇದು ಯುಐ ಜಗತ್ತು’ ಎಂದು ಹೇಳುವ ಲೈನ್ ಮೂಲಕ ಟೀಸರ್‌ ಆರಂಭವಾಗುತ್ತದೆ, ನೀವು ಸಹ AI ಜಗತ್ತಲ್ಲದ UI ಜಗತ್ತಿನ ಟೀಸರ್ ನೋಡಿ…..

Exit mobile version