Home ನಮ್ಮ ಜಿಲ್ಲೆ ಇಂಜೆಕ್ಷನ್ ಚುಚ್ಚಿ ವಿದ್ಯಾರ್ಥಿಗಳಿಗೆ ಹಿಂಸೆ?

ಇಂಜೆಕ್ಷನ್ ಚುಚ್ಚಿ ವಿದ್ಯಾರ್ಥಿಗಳಿಗೆ ಹಿಂಸೆ?

0

ಇಳಕಲ್(ಬಾಗಲಕೋಟೆ): ಸಮೀಪದ ತೊಂಡಿಹಾಳ ಗ್ರಾಮದ ಅಂಬೇಡ್ಕರ್ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ತಮ್ಮ ಹದ್ದುಬಸ್ತಿನಲ್ಲಿಡಲು ಇಂಜೆಕ್ಷನ್ ಚುಚ್ಚಿ ಹಿಂಸಿಸುತ್ತಿದ್ದ ಅಮಾನವೀಯ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಈ ಬಗ್ಗೆ ಪಾಲಕರು ಮತ್ತು ಜೈ ಭೀಮ್ ಆರ್ಮಿ ಸಂಘಟನೆಯ ಕಾರ್ಯಕರ್ತರು ಶಾಲೆಗೆ ಹೋಗಿ ಅಲ್ಲಿ ನಡೆಯುತ್ತಿರುವ ಕರ್ಮಕಾಂಡವನ್ನು ಪ್ರಶ್ನಿಸಿದಾಗ ಅಲ್ಲಿ ಬಂದ ಉತ್ತರಗಳು ಅತ್ಯಂತ ಕೀಳುಮಟ್ಟದಲ್ಲಿದ್ದವು ಎಂದು ಪಾಲಕರು ಗೋಳು ತೋಡಿಕೊಂಡರು.
ಮಕ್ಕಳಿಗೆ ಆಗುತ್ತಿರುವ ಸಮಸ್ಯೆಗಳು ಒಂದೆರಡಲ್ಲ, ಸಮಸ್ಯೆಗಳನ್ನು ಕಣ್ಣೀರಿಟ್ಟು ಹೇಳಿದ ಶಾಲಾ ಮಕ್ಕಳು ತಮಗೆ ನೀಡುತ್ತಿದ್ದ ಇಂಜೆಕ್ಷನ್ ಬಗ್ಗೆ ವಿವರಿಸಿದರು. ಸ್ಥಳಕ್ಕೆ ಆಗಮಿಸಿದ ಸಮಾಜ ಕಲ್ಯಾಣಾಧಿಕಾರಿ ಯಾವುದೇ ಪ್ರಶ್ನೆಗಳಿಗೆ ಉತ್ತರ ಕೊಡದೇ ಬೇಜವಾಬ್ದಾರಿಯ ಹೇಳಿಕೆಯನ್ನು ನೀಡಿದರೆನ್ನಲಾಗಿದ್ದು ಪಾಲಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲರಿಗೂ ಈ ರೀತಿ ದಬ್ಬಾಳಿಕೆ ಮಾಡುವ ಅಧಿಕಾರಿ ಇನ್ನು ಚಿಕ್ಕಮಕ್ಕಳ ಜವಾಬ್ದಾರಿಯನ್ನು ಯಾವ ರೀತಿ ನಿರ್ವಹಿಸಲು ಸಾಧ್ಯ ಎಂದು ಭೀಮ್ ಆರ್ಮಿಯ ಸದಸ್ಯ ಮಹಾಂತೇಶ ಚಲವಾದಿ ಮತ್ತಿತರರು ಆರೋಪಿಸಿದರು.

Exit mobile version