Home ತಾಜಾ ಸುದ್ದಿ ಆಸ್ತಿ ನೋಂದಣಿಗೆ ಎಲ್ಲೆಡೆ ಅವಕಾಶ

ಆಸ್ತಿ ನೋಂದಣಿಗೆ ಎಲ್ಲೆಡೆ ಅವಕಾಶ

0

ಬೆಂಗಳೂರು: ವ್ಯಕ್ತಿಗಳ ನಕಲಿ ಗುರುತು ನೀಡಿ ಆಸ್ತಿ ನೋಂದಣಿ ವೇಳೆ ವಂಚಿಸುತ್ತಿರುವುದನ್ನು ನಿಗ್ರಹಿಸಲು ಇಂದಿನಿಂದಲೇ ಅನ್ವಯಿಸುವಂತೆ ಆಧಾರ್ ಅಥವಾ ಇನ್ನೆರಡು ದಾಖಲೆ ಹಾಜರುಪಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಜೊತೆಗೆ ಸೆಪ್ಟಂಬರ್ ೨ ರಿಂದಲೇ ಆಯಾ ಜಿಲ್ಲಾ ವ್ಯಾಪ್ತಿಯ ಯಾವುದೇ ಸಬ್ ರೆಜಿಸ್ಟಾçರ್ ಕಚೇರಿ (ಎನಿವೇರ್)ಯಲ್ಲಾದರೂ ಭೂದಾಖಲೆಗಳ ನೋಂದಣಿಗೆ ಅವಕಾಶ ಮಾಡಿಕೊಡಲಾಗುತ್ತಿದೆ.
ಬೆಂಗಳೂರಿನ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ, ಇಲಾಖೆಯಲ್ಲಿ ಜನಪರ ಮತ್ತು ನಾಗರಿಕಸ್ನೇಹಿಯಾಗಿ ೨ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದ್ದೇವೆ. ಯಾರದ್ದೋ ಆಸ್ತಿಗೆ ಮತ್ತಾö್ಯರೋ ವೈಯಕ್ತಿಕ ನಕಲಿ ಗುರುತಿನ ದಾಖಲೆ ಸೃಷ್ಟಿಸಿ ನೋಂದಣಿ ಮಾಡುವ ಮೂಲಕ ವ್ಯವಸ್ಥಿತವಾಗಿ ಭೂಮಿ ದರೋಡೆ ಮಾಡುವುದನ್ನು ತಡೆಗಟ್ಟುವ ಸಲುವಾಗಿ, ರಾಜ್ಯದ ಎಲ್ಲಾ ಸಬ್ ರಿಜಿಸ್ಟಾçರ್ ಕಚೇರಿಯಲ್ಲಿ ನೋಂದಣಿ ಪ್ರಕ್ರಿಯೆ ವೇಳೆ ಆಧಾರ್, ಪ್ಯಾನ್‌ಕಾರ್ಡ್ ಅಥವಾ ಪಾಸ್‌ಪೋರ್ಟ್ ಯಾವುದಾದರೊಂದು ದಾಖಲೆಯನ್ನು ಕಡ್ಡಾಯವಾಗಿ ಹಾಜರುಪಡಿಸುವ ವ್ಯವಸ್ಥೆ ಇಂದಿನಿಂದಲೇ ರಾಜ್ಯಾದ್ಯಂತ ಜಾರಿಯಾಗಲಿದೆ. ಇದು ಭೂಮಾಲೀಕತ್ವದ ಸುರಕ್ಷತೆ ಮತ್ತು ವಂಚನೆ ತಪ್ಪಿಸುವ ಈ ಕ್ರಮಕ್ಕೆ ನಾಗರಿಕರು ಸಹಕರಿಸುವಂತೆ ಮನವಿ ಮಾಡಿದರು.
ನೂಕುನುಗ್ಗಲು ತಪ್ಪಿಸಲು ಕ್ರಮ
ರಾಜ್ಯದ ೨೫೭ ಸಬ್ ರೆಜಿಸ್ಟ್ರಾರ್ ಕಚೇರಿಗಳ ಪೈಕಿ ೫೦-೬೦ ರಲ್ಲಿ ಮಾತ್ರ ತೀವ್ರ ಒತ್ತಡದ ಕೆಲಸ ಮತ್ತು ವ್ಯವಹಾರ ನಡೆಯುತ್ತಿದೆ. ಇಂತಹ ಕಚೇರಿಗಳಲ್ಲಿ ಜನತೆಗೆ ಸಹಜ ಸಮಸ್ಯೆ ಎದುರಾಗುತ್ತಿದೆ. ಆದರೆ ಉಳಿದಂತೆ ಅಷ್ಟಾಗಿ ಒತ್ತಡ ಇರುವುದಿಲ್ಲ. ಹಾಗಾಗಿ ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ಸಬ್ ರೆಜಿಸ್ಟ್ರಾರ್ ಕಚೇರಿಗಳಲ್ಲಿ ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆಯನ್ನು ಸೆಪ್ಟಂಬರ್ ೨ ರಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಿಸ್ತರಿಸಲಾಗುತ್ತಿದೆ. ಪ್ರಾಯೋಗಿಕವಾಗಿ ತುಮಕೂರು ಹಾಗೂ ಬೆಳಗಾವಿಯಲ್ಲಿ ಇದು ಯಶಸ್ವಿಯಾಗಿದೆ. ಇನ್ಮುಂದೆ ಜನಸಂದಣಿ ಹಾಗೂ ಸಿಬ್ಬಂದಿ ಕಾರ್ಯಒತ್ತಡ ಹಂಚುವ ನಿಟ್ಟಿನಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ತಮಗೆ ಸಮೀಪದ ಕಚೇರಿಗಳಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ ಎಂದು ಸಚಿವರು ವಿವರಿಸಿದರು.
ಡಿಜಿಟಲ್ ದತ್ತಾಂಶ ಸದ್ಭಳಕೆ
ತಂತ್ರಜ್ಞಾನವನ್ನು ಬಳಸಿಕೊಂಡು ಜನರಿಗೆ ಸುಲಲಿತವಾಗಿ ಸೇವೆ ಒದಗಿಸಲು ಈ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಡಿಜಿಟಲ್ ದತ್ತಾಂಶವನ್ನು ಸದ್ಭಳಕೆ ಮಾಡಿಕೊಳ್ಳುವ ಮೂಲಕ ಅತ್ಯಾಧುನಿಕ ವ್ಯವಸ್ಥೆ ಜಾರಿಯಾಗುತ್ತಿದೆ. ರಾಜ್ಯದಲ್ಲಿ ಕೃಷಿಭೂಮಿ ಮತ್ತು ಲೇಔಟ್ ಎರಡೂ ಮಾದರಿಯಲ್ಲಿ ೫೦ ಲಕ್ಷ ಆಸ್ತಿಗಳಿಗೆ. ಇವುಗಳ ಮಾರಾಟ ಉಭಯ ಮಾಲೀಕರಿಂದಲೂ ಆಗಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮುನಿಸಿಪಾಲಿಟಿಯಲ್ಲಿ ಯಾರು ಅಧಿಕೃತ ಖಾತೆ ಹೊಂದಿರುತ್ತಾರೋ ಅಂತವರಿಗೆ ಮಾತ್ರ ಇನ್ನು ಮುಂದೆ ನೋಂದಣಿ ಆಗಲಿದೆ. ಎರಡು ಕಡೆ ಮಾರಾಟವನ್ನು ನಿಗ್ರಹಿಸಲು ಇನ್ನೆರಡು ವಾರಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷ್ಣಬೈರೇಗೌಡ ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ವಿ. ರಶ್ಮಿ ಮಹೇಶ್ ಹಾಗೂ ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರಾದ ದಯಾನಂದ ಕೆ.ಎ ಉಪಸ್ಥಿತರಿದ್ದರು.

Exit mobile version