Home ನಮ್ಮ ಜಿಲ್ಲೆ ಆಸ್ತಿ ತೆರಿಗೆ ದರ ಏರಿಕೆ: ಸ್ಪಷ್ಟಪಡಿಸಿದ ಡಿಕೆಶಿ

ಆಸ್ತಿ ತೆರಿಗೆ ದರ ಏರಿಕೆ: ಸ್ಪಷ್ಟಪಡಿಸಿದ ಡಿಕೆಶಿ

0

ಬೆಂಗಳೂರು: ಬೆಂಗಳೂರಿನ ನಿವಾಸಿಗಳು ಆತಂಕಪಡುವ ಅವಶ್ಯಕತೆಯಿಲ್ಲ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ತಿಳಿಸಿದ್ದಾರೆ.
ಆಸ್ತಿ ತೆರಿಗೆ ದರ ಏರಿಕೆ ಸುದ್ದಿಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಏಪ್ರಿಲ್‌ 1ರಿಂದ ಅನ್ವಯವಾಗುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ದರ ಏರಿಕೆಯಾಗಲಿದೆ ಎನ್ನುವ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. BBMP ಯಾವುದೇ ಆಸ್ತಿ ತೆರಿಗೆಯನ್ನು ಏರಿಕೆ ಮಾಡಿಲ್ಲ 2016ರಲ್ಲಿ ಸೂಚಿಸಿರುವ ದರದಂತೆಯೇ ಪ್ರಸ್ತುತ ಆಸ್ತಿ ತೆರಿಗೆ ದರಗಳು ಚಾಲ್ತಿಯಲ್ಲಿರುತ್ತವೆ ಹಾಗೂ ಮುಂದುವರಿಯಲಿವೆ. ಬೆಂಗಳೂರಿನ ನಿವಾಸಿಗಳು ಆತಂಕಪಡುವ ಅವಶ್ಯಕತೆಯಿಲ್ಲ ಎಂದಿದ್ದಾರೆ.

Exit mobile version