ರಾಯಚೂರು; ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭಕ್ತರು ಹುಂಡಿಗೆ ಹಾಕಿದ ಕಾಣಿಕೆ ಒಟ್ಟು 4.15ಕೋಟಿ ಹಣ 33ದಿನಗಳಲ್ಲಿ ಸಂಗ್ರಹವಾಗಿರುವುದು ಇತಿಹಾಸ ದಾಖಲೆಯಾಗಿದೆ ಎಂದು ಶ್ರೀ ಮಠ ತಿಳಿಸಿದೆ.
4.07,11,838 ಮೊತ್ತದ ನೋಟುಗಳು. 8,20,900 ಮೊತ್ತದ ನಾಣ್ಯಗಳು ಸೇರಿದಂತೆ ಒಟ್ಟು 4,15,32,738 ಹಣವನ್ನು ಹುಂಡಿಯಲ್ಲಿ ಸಂಗ್ರಹವಾಗಿದೆ. ಅಲ್ಲದೇ 44ಗ್ರಾಂ ಚಿನ್ನ, 3ಕೆಜಿ 642ಗ್ರಾಂ ಬೆಳ್ಳಿ(ರಜತ)ಯನ್ನು ಭಕ್ತರು ರಾಯರ ಹುಂಡಿಯಲ್ಲಿ ಹಾಕಿದ್ದಾರೆ. ಈ ಪ್ರಮಾಣದಲ್ಲಿ ಶ್ರೀಮಠದ ಇತಿಹಾಸದಲ್ಲಿ ದಾಖಲಾಗಿರುವ ಕಾಣಿಕೆಯಾಗಿದೆ ಎಂದು ಮಂತ್ರಾಲಯ ಶ್ರೀರಾಯರ ಮಠದ ವ್ಯವಸ್ಥಾಪಕರಾದ ಎಸ್.ಕೆ ಶ್ರೀನಿವಾಸರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.