ಹುಬ್ಬಳ್ಳಿ: ನಗರದ BVB ಕಾಲೇಜು ಕ್ಯಾಂಪಸ್‌ನಲ್ಲಿ ನಟ ಉಪೇಂದ್ರ ಹಾಗೂ UI ಚಿತ್ರ ತಂಡ ಮಾದಕವಸ್ತು ವಿರೋಧಿ ಅಭಿಯಾನದಲ್ಲಿ ಭಾಗಿಯಾಗಿ, ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದ್ದಾರೆ
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ನಿಂದ ಹಮ್ಮಿಕೊಂಡಿದ್ದ ಜಾಗೃತಿ ಜಾಥದಲ್ಲಿ ಭಾಗಿಯಾಗಿ ಮಾತನಾಡಿದ ನಟ ಉಪೇಂದ್ರರವರು ನಿಮ್ಮೊಳಗೆ ಒಬ್ಬ ನಾಯಕ ಇದ್ದಾನೆ. ಹೇ ಸುಮ್ಮನಿರಪ್ಪ ಅಂತ ನಾವು ಕೂರಿಸಿರ್ತೇವೆ . ಎಲ್ಲದಕ್ಕೂ ನಿಮ್ಮಲ್ಲೇ ಉತ್ತರ ಇರುತ್ತೆ ನಾನು ನನ್ನ ಮೊದಲ ಸಿನಿಮಾದಲ್ಲೇ ಹೇಳಿದ್ದೆ. ಐಮ್ ಗಾಡ್, ಗಾಡ್ ಈಸ್ ಗ್ರೇಟ್ ಎಂದು. UI ಟ್ರೇಲರ್ ನೋಡಿದ್ರಾ, ನೀವೆಲ್ಲ ಈಗ ವಾರ್ನರ್ಸ್. ಧಿಕ್ಕಾರಕ್ಕಿಂತ, ಅಧಿಕಾರಕ್ಕೆ ಬೆಲೆ ಜಾಸ್ತಿ, ನಿಮ್ಮೊಳಗಿನ ಆತ್ಮ, ಪರಮಾತ್ಮನ ಮಾತು ಕೇಳಿ ಬೇರೆ ಯಾರ ಮಾತು ಕೇಳೋದು ಬೇಡ ಎಂದು ಜಾಗೃತಿ ಮೂಡಿಸಿದ್ದಾರೆ.
ನಟ ಉಪೇಂದ್ರ ಅವರ UI ಸಿನಿಮಾ ಡಿಸೆಂಬರ್ 20 ರಂದು ರಿಲೀಸ್ ಆಗುತ್ತಿದೆ.