Home ತಾಜಾ ಸುದ್ದಿ ಅಸಭ್ಯ ವರ್ತನೆ: ಯುವಕನಿಗೆ ಧರ್ಮದೇಟು

ಅಸಭ್ಯ ವರ್ತನೆ: ಯುವಕನಿಗೆ ಧರ್ಮದೇಟು

0

ಮಂಗಳೂರು: ಬಸ್ಸಿನಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನಿಗೆ ಯುವತಿಯ ಸಂಬಂಧಿಕರು ಧರ್ಮದೇಟು ನೀಡಿರುವ ಘಟನೆ ನಗರದ ಬಳ್ಳಾಲ್ ಬಾಗ್‌ನಲ್ಲಿ ನಡೆದಿದೆ.
ಸ್ಟೇಟ್‌ಬ್ಯಾಂಕಿಗೆ ಹೋಗುವ ಬಸ್ಸಿನಲ್ಲಿ ಯುವತಿ ಪ್ರಯಾಣಿಸುತ್ತಿದ್ದಳು. ಇದೇ ವೇಳೆ ಅದೇ ಬಸ್ಸಿನಲ್ಲಿ ಪ್ರಕಾಣಿಸುತ್ತಿದ್ದ ಯುವಕನೊಬ್ಬ ಯುವತಿಯೊಂದಿಗೆ ಅಸಭ್ಯ ರೀತಿಯಲ್ಲಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ. ತಕ್ಷಣ ಯುವತಿ ಈ ವಿಚಾರವನ್ನು ತನ್ನ ಸಂಬಂಧಿಕರಿಗೆ ತಿಳಿಸಿದ್ದು, ಸಂಬಂಧಿಕರು ಬಸ್ಸನ್ನು ಬಲ್ಲಾಳ್‌ಬಾಗ್‌ನಲ್ಲಿ ತಡೆದಿದ್ದಾರೆ.
ಬಳಿಕ ಯುವಕನನ್ನು ಬಸ್ ನಿಂದ ಕೆಳಗಿಳಿಸಿದ ಸಂಬಂಧಿಕರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವಕನಿಗೆ ಧರ್ಮದೇಟು ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Exit mobile version