Home ತಾಜಾ ಸುದ್ದಿ ಅಶ್ವತ್ಥಾಮನ ನೆನಪು ಶಾಶ್ವತ

ಅಶ್ವತ್ಥಾಮನ ನೆನಪು ಶಾಶ್ವತ

0

ಬೆಂಗಳೂರು: ಅಶ್ವತ್ಥಾಮನ ನೆನಪು ನಮ್ಮ ಮನದಲ್ಲಿ ಶಾಶ್ವತವಾಗಿರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಮೈಸೂರು ದಸರಾದಲ್ಲಿ ಪಾಲ್ಗೊಂಡು ಲಕ್ಷಾಂತರ ಜನರ ಮೆಚ್ಚುಗೆ ಗಳಿಸಿದ್ದ ಆನೆ ಅಶ್ವತ್ಥಾಮನ ಸಾವು ನೋವುಂಟುಮಾಡಿದೆ. ತನ್ನ ಶಾಂತ ಸ್ವಭಾವ ಮತ್ತು ಗಾಂಭೀರ್ಯದಿಂದಾಗಿ ಬಹುಬೇಗನೇ ವಿಶ್ವವಿಖ್ಯಾತ ದಸರಾದ ಭಾಗವಾಗಿ ತಾಯಿ ಚಾಮುಂಡೇಶ್ವರಿಯ ಸೇವೆಗೈದಿದ್ದ ಅಶ್ವತ್ಥಾಮನ ನೆನಪು ನಮ್ಮ ಮನದಲ್ಲಿ ಶಾಶ್ವತವಾಗಿರಲಿದೆ ಎಂದು ಸ್ಮರಿಸಿಕೊಂಡಿದ್ದಾರೆ.

Exit mobile version