Home ನಮ್ಮ ಜಿಲ್ಲೆ ಉಡುಪಿ ಅವರ ಹಬ್ಬಕ್ಕೆ ಅವರೇ ಬರದಿದ್ದರೆ ಹೇಗೆ..?

ಅವರ ಹಬ್ಬಕ್ಕೆ ಅವರೇ ಬರದಿದ್ದರೆ ಹೇಗೆ..?

0

ನನಗೆ ಗೊತ್ತಿರುವಷ್ಟು ಸತ್ಯ ನಾನು ಹೇಳಿದ್ದೇನೆ

ಉಡುಪಿ: ನನಗೆ ಗೊತ್ತಿರುವಷ್ಟು ಸತ್ಯ ನಾನು ಹೇಳಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಹೇಳಿದ್ದಾರೆ.
ನಿನ್ನೆ ನೀಡಿದ ನಿಮ್ಮ ಹೇಳಿಕೆಯಿಂದ ಸಿನಿಮಾ ಕಲಾವಿದರು ಬೇಸರಗೊಂಡಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು. ಸಿನಿಮಾದವರು ಏನು ಬೇಕಾದರೂ ಮಾತನಾಡಿಕೊಳ್ಳಲಿ. ನನಗೆ ಗೊತ್ತಿರುವ ಸತ್ಯವನ್ನು ಹೇಳಿದ್ದೇನೆ. ಅವರು ಪ್ರತಿಭಟನೆ ಮಾಡಲಿ, ಹೋರಾಟ ಮಾಡಲಿ. ನಮ್ಮ ನೀರು, ನಮ್ಮ ಹಕ್ಕು. ಅವರು ಯಾವಾಗಲೂ ನೆಲ, ಜಲದ ವಿಚಾರಕ್ಕೆ ಪಕ್ಷಾತೀತವಾಗಿ ಸಹಕಾರ ನೀಡುತ್ತೇವೆ ಅಂತ ಹೇಳುತ್ತಿದ್ದವರು. ಅಂದು ಮೇಕೆದಾಟು ಯಾತ್ರೆಗೆ ಯಾರೂ ಬರಲಿಲ್ಲ, ನೆಲ, ಜಲದ ವಿಚಾರಕ್ಕೆ ಪಕ್ಷಾತೀತವಾಗಿ ಸಹಕಾರ ನೀಡಬೇಕಿತ್ತು ಆದರೆ ಅವರು ಬರಲ್ಲಿಲ್ಲ, ಮೇಕೆದಾಟು ಯಾತ್ರೆಗೆ ಬಂದು ಪ್ರೇಮ್, ದುನಿಯಾ ವಿಜಯ್ ಮತ್ತು ಸಾಧು ಕೋಕಿಲ ಕೇಸ್ ಹಾಕಿಸಿಕೊಂಡರು. ಬಿಜೆಪಿಯವರು ಅವರೆಲ್ಲರ ಮೇಲೆ ಕೇಸ್ ಹಾಕಿದರು. ಬೇಕಿದ್ದರೆ ನಮ್ಮ ಮೇಲೆ ಕೇಸ್ ಹಾಕಿಕೊಳ್ಳಲಿ. ಆದರೆ ನಿನ್ನೆ ನಡೆದ ಫಿಲ್ಮ್ ಫೆಸ್ಟಿವಲ್ ಕಾರ್ಯಕ್ರಮ ನನ್ನದಾ? ಅಥವಾ ಪಕ್ಷದ್ದಾ ಅದು ಚಿತ್ರರಂಗದ ಹಬ್ಬ. ಆಹಬ್ಬಕ್ಕೂ ಅನೇಕರು ಬರಲಿಲ್ಲ. ಫಿಲ್ಮ್ ಇಂಡಸ್ಟ್ರಿ ಸತ್ತು ಹೋಯ್ತು, ಚಿತ್ರಮಂದಿರಗಳೆಲ್ಲ ಮುಚ್ಚಿ ಹೋಯ್ತು, ಊಟ ಇಲ್ಲ ಅಂತೆಲ್ಲ ಚಿತ್ರರಂಗದವರು ಮಾತನಾಡುತ್ತಾರೆ. ಆದರೆ ಫಿಲ್ಮ್ ಫೆಸ್ಟಿವಲ್‌ ಗೆ ಅವರ ಪ್ರೋತ್ಸಾಹ ಇಲ್ಲ. ಹಾಗಾದ್ರೆ ಅಂತಾರಾಷ್ಟ್ರೀಯ ಚಿತ್ರೋತ್ಸವನ್ನು ಸರ್ಕಾರ ಯಾರಿಗಾಗಿ ಮಾಡುತ್ತಿದೆ, ಅಶೋಕ ಆಗಲಿ ಫಿಲ್ಮ್ ಇಂಡಸ್ಟ್ರಿಐವರಾಗಲಿ ಏನು ಬೇಕಾದರೂ ಮಾತನಾಡಿಕೊಳ್ಳಲಿ, ನನಗೆ ಗೊತ್ತಿರುವಷ್ಟು ಸತ್ಯ ನಾನು ಹೇಳಿದ್ದೇನೆ ಎಂದರು.

Exit mobile version