Home ತಾಜಾ ಸುದ್ದಿ ಅಮೆರಿಕಾದಿಂದ ಭಾರತಕ್ಕೆ ಮರಳಿದ 104 ಅಕ್ರಮ ವಲಸಿಗರು

ಅಮೆರಿಕಾದಿಂದ ಭಾರತಕ್ಕೆ ಮರಳಿದ 104 ಅಕ್ರಮ ವಲಸಿಗರು

0

ಅಮೆರಿಕಾದಿಂದ ಗಡಿಪಾರು ಮಾಡಲಾದ ಭಾರತದ 104 ಅಕ್ರಮ ವಲಸಿಗರು ಭಾರತಕ್ಕೆ ಬಂದಿಳಿದಿದ್ದಾರೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅತಿ ದೊಡ್ಡ ಕಾರ್ಯಾಚರಣೆಯಲ್ಲಿ ಒಂದಾದ ಅಕ್ರಮ ವಲಸಿಗರ ಗಡಿಪಾರು ಪ್ರಕ್ರಿಯೆ ಭರದಿಂದ ಸಾಗಿದ್ದು. ಇಂದು ಅಮೆರಿಕಾದ ಸೇನಾ ವಿಮಾನ ಮೂಲಕ ಅಮೃತಸರ ವಿಮಾನ ನಿಲ್ದಾಣಕ್ಕೆ 104 ಅಕ್ರಮ ವಲಸಿಗರನ್ನು ಭಾರತದ ಅಧಿಕಾರಿಗಳ ವಶಕ್ಕೆ ನೀಡಲಾಗಿದೆ. ಗಡಿಪಾರಾದ ಈ 104 ವಲಸಿಗರು ಉದ್ಯೋಗ ಅರಸಿ ಅಕ್ರಮವಾಗಿ ಅಮೆರಿಕಾ ದೇಶವನ್ನು ಪ್ರವೇಶಿಸಿದ್ದರು. ಅಮೆರಿಕಾ- ಮೆಕ್ಸಿಕೋ ಗಡಿಯಲ್ಲಿ ಈ 104 ಮಂದಿ ಸಿಕ್ಕಿಬಿದ್ದಿದ್ದು ಗಡಿಪಾರು ಆಗಿದ್ದಾರೆ. ಇತ್ತೀಚೆಗೆ ಈ ಅಕ್ರಮ ವಲಸಿಗರನ್ನ ಭಾರತದ ನಾಗರಿಕರನ್ನ ಮತ್ತೆ ಸೇರಿಸಿಕೊಳ್ಳಲು ಭಾರತದ ವಿದೇಶಾಂಗ ಸಚಿವ ಜೈ ಶಂಕರ್ ಅವರು ಒಪ್ಪಿಗೆ ಸೂಚಿಸಿದ್ದರು. ಅಕ್ರಮ ವಲಸಿಗರಲ್ಲಿ 79 ಮಂದಿ ಪುರುಷರು, 25 ಮಹಿಳೆಯರು, 13 ಮಕ್ಕಳು ಭಾರತಕ್ಕೆ ಗಡಿಪಾರು ಆಗಿದ್ದಾರೆ. ಅಮೆರಿಕಾ ವಿಮಾನದ ಮೂಲಕ ಅಮೃತಸರಕ್ಕೆ 104 ಮಂದಿ ವಲಸಿಗರು ಶಿಫ್ಟ್​ ಆಗಿದ್ದು, ಅಮೃತಸರದಿಂದ ಅವರವರ ರಾಜ್ಯಗಳಿಗೆ ವಲಸಿಗರನ್ನು ರವಾನೆ​​ ಮಾಡಲಾಗುತ್ತಿದೆ.

Exit mobile version