Home ಅಪರಾಧ ಅಪಘಾತ: ಬೈಕ್‌ ಸವಾರ ಸಾವು

ಅಪಘಾತ: ಬೈಕ್‌ ಸವಾರ ಸಾವು

0

ಬಾಗಲಕೋಟೆ(ಕುಳಗೇರಿ ಕ್ರಾಸ್): ಮಣ್ಣಿನ ದಿನ್ನೆಗೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಕಾಕನೂರ ಗ್ರಾಮದ ಹತ್ತಿರ ನೀರಲಕೇರಿ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಬೈಕ್ ಸವಾರ ಚಿಮ್ಮನಕಟ್ಟಿ ಗ್ರಾಮದ ಭರಮಗೌಡ ತುಕಾರಾಮ ದೇಸಾಯಿಗೌಡ್ರ (32) ಎಂದು ತಿಳಿದು ಬಂದಿದ್ದು ಅದೃಷ್ಟವಶಾತ್ ಬೈಕ್‌ನಲ್ಲಿದ್ದ ತನ್ನ ಸಹೋದರಿಯ ಚಿಕ್ಕಮಗು ಬದುಕುಳಿದಿದೆ. ಸ್ಥಳಕ್ಕೆ ಬಾದಾಮಿ ಪಿಎಸ್ಐ ವಿಠಲ್ ನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜಿಯೋ ಟವರನ ಕೇಬಲ್ ಹಾಕಲು ತೆಗೆದಿದ್ದ ತಗ್ಗು ಎಂದು ಹೇಳಲಾಗುತ್ತಿದ್ದು. ತಗ್ಗು ಅಗೆದ ಮಣ್ಣಿನ ದಿನ್ನೆ ರಸ್ತೆ ಮೇಲೆ ಹಾಕಿದ್ದರ ಪರಿಣಾಮ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.

Exit mobile version