ಔರಾದ : ತಾಲ್ಲೂಕಿನ ಲಾಧಾ ಗ್ರಾಮದ ಬಳಿ ಗುರುವಾರ ಔರಾದ್-ಬೀದರ್ ರಾಷ್ಟ್ರೀಯ ಹೆದ್ದಾರಿಯ ಮಾರ್ಗಮಧ್ಯದಲ್ಲಿ ಕಾರ್ ಮತ್ತು ಸ್ಕಾರ್ಪಿಯೋ ಮಧ್ಯೆ ದ್ವಿಚಕ್ರ ವಾಹನ ಸಿಲುಕಿ ಇಬ್ಬರು ಸವಾರರು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.
ಲಾಧಾ ಗ್ರಾಮದ ಸಿದ್ದು ಬಾಬುರಾವ್(೩೬), ಧೂಪಾತ್‌ಮಹಾಗಾಂವ್ ಗ್ರಾಮದ ಸುಖದೇವ್ ಅಮೃತ್(೩೯) ಸಾವನಪ್ಪಿದವರು. ಇವರಿಬ್ಬರು ಜೆಸ್ಕಾಂನಲ್ಲಿ ಬಿಲ್ ಕಲೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸ್ಕಾರ್ಪಿಯೋದಲ್ಲಿರುವ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಬೀದರ್‌ಗೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಈ ಕುರಿತು ಸಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.