Home ಅಪರಾಧ ಅನ್ಯ ಕೋಮಿನ ಯುವಕನ ಬೆದರಿಕೆಗೆ ಹಿಂದೂ ಯುವತಿ ಆತ್ಮಹತ್ಯೆ ಯತ್ನ

ಅನ್ಯ ಕೋಮಿನ ಯುವಕನ ಬೆದರಿಕೆಗೆ ಹಿಂದೂ ಯುವತಿ ಆತ್ಮಹತ್ಯೆ ಯತ್ನ

0

ಮಂಗಳೂರು: ಸುರತ್ಕಲ್ ಇಡ್ಯಾ ನಿವಾಸಿ ಶಾರಿಕ್ ನೂರ್‌ಜಹಾನ್ ಎಂಬಾತ ಹಿಂದೂ ಯುವತಿಯೊಬ್ಬಳಿಗೆ ಫೇಸ್‌ಬುಕ್ ಮೆಸೆಂಜರ್ ಮೂಲಕ ಅಶ್ಲೀಲ ಮೆಸೇಜ್ ಹಾಗೂ ತನ್ನೊಂದಿಗೆ ಬರದಿದ್ದರೆ ೨೪ ತುಂಡು ಮಾಡಿ ಬಿಸಾಡುವೆ ಎಂದು ಬೆದರಿಕೆ ಹಾಕಿದ ಯುವಕನ ವಿರುದ್ಧ ಕ್ಷಿಪ್ರ ಕ್ರಮವನ್ನು ಪೊಲೀಸರು ಕೈಗೊಳ್ಳದೆ ಇದ್ದ ಪರಿಣಾಮ ಸಂತ್ರಸ್ತ ಯುವತಿ ಆತ್ಮಹತ್ಯೆಗೆ ಯತ್ನ ಮಾಡಿದ್ದಾಳೆ.
‘ಒಬ್ಬ ಮುಸ್ಲಿಮನ ಕೈಯ್ಯಲ್ಲಿ ಅತ್ಯಾಚಾರವಾಗಿ ಸಾಯುವ ಬದಲು ಈಗಲೇ ಸಾಯುತ್ತೇನೆ. ಪೊಲೀಸರಿಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನ ಆಗಿಲ್ಲ. ಶಾರೀಕ್ ಹಾಗೂ ನೂರ್‌ಜಹಾನ್ ಇಬ್ಬರನ್ನೂ ಬಿಡಬಾರದು” ಎಂದು ಡೆತ್‌ನೋಟ್‌ನಲ್ಲಿ ಹೆಸರು ಉಲ್ಲೇಖಿಸಿ ಆತ್ಮಹತ್ಯೆ ಯತ್ನಿಸಿದ್ದಾಳೆ ಎಂದು ತಿಳಿದುಬಂದಿದೆ. ಆಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪೊಲೀಸ್ ವೈಫಲ್ಯದ ವಿರುದ್ಧ ಶಾಸಕ ಡಾ. ಭರತ್ ಶೆಟ್ಟಿ ವೈ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುವತಿಯ ಕುಟುಂಬಸ್ಥರು ದೂರು ದಾಖಲಿಸುವ ಸಂದರ್ಭ ನಿರ್ಲಕ್ಷ್ಯವಾಗಿ ವರ್ತಿಸಿರುವ ಠಾಣಾ ಪೊಲೀಸರ ಕ್ರಮ ಖಂಡನೀಯ. ಯುವತಿ ಇದೀಗ ಜೀವನ್ಮರಣದ ಸ್ಥಿತಿಯಲ್ಲಿದ್ದು, ಇದರ ಜವಾಬ್ದಾರಿಯನ್ನು ಪೊಲೀಸರೇ ಹೊರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂ ಕಾರ್ಯಕರ್ತರು ಸಹನೆ ಕಳೆದುಕೊಳ್ಳುವ ಮುನ್ನ ಜಿಲ್ಲಾಡಳಿತ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ತಪ್ಪಿತಸ್ಥರನ್ನು ಬಂಧಿಸುವ ಮೂಲಕ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Exit mobile version