Home ಅಪರಾಧ ಅಂಜಲಿ ಹತ್ಯೆ ಪ್ರಕರಣ: ಮತ್ತೋರ್ವ ಅಧಿಕಾರಿ ಸಸ್ಪೆಂಡ್

ಅಂಜಲಿ ಹತ್ಯೆ ಪ್ರಕರಣ: ಮತ್ತೋರ್ವ ಅಧಿಕಾರಿ ಸಸ್ಪೆಂಡ್

0

ಹುಬ್ಬಳ್ಳಿ: ಅಂಜಲಿ ಹತ್ಯೆ ಪ್ರಕರಣದಲ್ಲಿ ಡಿಸಿಪಿ ಎಂ.ರಾಜೀವ್ ನಂತರ ದಕ್ಷಿಣ ವಿಭಾಗದ ಎಸಿಪಿ ವಿಜಯಕುಮಾರ ತಳವಾರ ಅವರನ್ನು ಸಸ್ಪೆಂಡ್ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ದಕ್ಷಿಣ ವಿಭಾಗದ ಎಸಿಪಿಯಾಗಿರುವ ವಿಜಯಕುಮಾರ ಅವರು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಸಸ್ಪೆಂಡ್ ಮಾಡಲಾಗಿದೆ. ಬೆಂಡಿಗೇರಿ ಪಿಐ ಸಿ.ಬಿ.ಚಿಕ್ಕೋಡಿ, ಹೆಡ್ ಕಾನ್ಸಟೇಬಲ್ ರೇಖಾ ಹಾವರಡ್ಡಿ ಅವರನ್ನು ಸಸ್ಪೆಂಡ್ ಮಾಡಲಾಗಿತ್ತು. ಇದಾದ ಬಳಿಕ ಡಿಸಿಪಿ ಎಂ.ರಾಜೀವ್ ಅವರನ್ನು ಸಸ್ಪೆಂಡ್ ಮಾಡಲಾಗಿತ್ತು. ಈಗ ವಿಜಯಕುಮಾರ ಅವರನ್ನು ಗೃಹ ಸಚಿವರು ಹುಬ್ಬಳ್ಳಿಯಲ್ಲಿದ್ದಾಗಲೇ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.

Exit mobile version