ನ್ಯೂಯಾರ್ಕ್ ಸಿಟಿ: ವಾಯುಮಾರ್ಗ ಮಧ್ಯದಲ್ಲಿ ಹಡ್ಸನ್ ನದಿಗೆ ಹೆಲಿಕಾಪ್ಟರ್ ಬಿದ್ದು ಸಂಭವಿಸಿದ ದುರಂತದಲ್ಲಿ ಕನಿಷ್ಠ ಆರು ಮಂದಿ ಮೃತಪಟ್ಟ ಘಟನೆ ನಡೆದಿದೆ
ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ ಇನ್ನು ವಿಡಿಯೋದಲ್ಲಿ ಬೆಲ್ 206 ಹೆಲಿಕಾಪ್ಟರ್‌ನ ಪತನಗೊಂಡ ಭಾಗಗಳು ಹಡ್ಸನ್ ನದಿಗೆ ಬೀಳುವುದನ್ನು ನೋಡಬಹುದಾಗಿದೆ. ಅಲ್ಲದೇ ಹೆಲಿಕಾಪ್ಟರ್‌ನ ರೋಟರ್ ಬ್ಲೇಡ್ ತುಂಡಾಗಿ ನದಿಗೆ ಮೊದಲು ಬಿದ್ದಿದೆ. ಬಳಿಕ ಪಕ್ಕದಲ್ಲಿ ಹೆಲಿಕಾಪ್ಟರ್ ನದಿಗೆ ಅಪ್ಪಳಿಸಿದೆ. ಪೈಲಟ್ ಸೇರಿದಂತೆ ಆರು ಮಂದಿ ಸಾವಿಗೀಡಾಗಿದ್ದಾರೆ ಎನ್ನಲಾಗಿದ್ದು. ಮೃತರಲ್ಲಿ ನಾಲ್ವರು ಸ್ಪ್ಯಾನಿಷ್ ಮೂಲದ ಒಂದೇ ಕುಟುಂಬದವರಾಗಿದ್ದು, ಪ್ರವಾಸಕ್ಕಾಗಿ ನ್ಯೂಯಾರ್ಕ್‌ಗೆ ಬಂದಿದ್ದರು. ಮೃತಪಟ್ಟವರಲ್ಲಿ ಮೂವರು ಮಕ್ಕಳು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.