Home ಅಪರಾಧ ಹಳೆ ದ್ವೇಷ: ಕಲ್ಲು ಎತ್ತಿಹಾಕಿ ವ್ಯಕ್ಯಿಯ ಕೊಲೆ

ಹಳೆ ದ್ವೇಷ: ಕಲ್ಲು ಎತ್ತಿಹಾಕಿ ವ್ಯಕ್ಯಿಯ ಕೊಲೆ

0

ವಿಜಯನಗರ: ಹಳೆ ದ್ವೇಷದಿಂದ ತಲೆಯ ಮೇಲೆ ಕಲ್ಲು ಎತ್ತಿಹಾಕಿ ವ್ಯಕ್ಯಿಯ ಕೊಲೆ ಮಾಡಿರುವ ಘಟನೆ ನಡೆದಿದೆ.
ಹೊಸಪೇಟೆಯ ಜಂಬುನಾಥ ರಸ್ತೆಯ ಅಂಬೇಡ್ಕರ್ ನಗರ 4 ನೇ ಕ್ರಾಸ್‌ ಬಳಿ ಈ ಘಟನೆ ನಡೆದಿದದ್ದು, ಮೃತರನ್ನು ಹೊನ್ನೂರು ವಲಿ ಸ್ವಾಮಿ (30) ಎಂದು ಗುರುತಿಸಲಾಗಿದೆ. ಕಾಳಿ ಅಲಿಯಾಸ್ ಹುಚ್ಚ ಕಾಳಿ (36) ಕೊಲೆ ಆರೋಪಿ. ಕೊಲೆಯಾದ ಹೊನ್ನೂರ ದಾವಣಗೆರೆಯಲ್ಲಿ ಇರುತ್ತಿದ್ದು ಜಂಬುನಾಥ ಜಾತ್ರೆ ಹಿನ್ನಲೆ ಹೊಸಪೇಟೆಗೆ ಆಗಮಿಸಿದ್ದ, ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ವಲಿ ಸ್ವಾಮಿ ಬರುವುದನ್ನು ಕಾದು ಕುಳಿತಿದ್ದ ಕಾಳಿ ಆತನನ್ನು ಕೊಲೆ ಮಾಡಿದ್ದಾನೆ.
ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version