Home ತಾಜಾ ಸುದ್ದಿ ಪೋಲಾಗುತ್ತಿರುವ ಕೃಷ್ಣೆಯ ನೀರು

ಪೋಲಾಗುತ್ತಿರುವ ಕೃಷ್ಣೆಯ ನೀರು

0

ಬಾಗಲಕೋಟೆ(ಇಳಕಲ್): ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಗೊರಬಾಳ ಗ್ರಾಮದ ಬಳಿ ಜಿಂದಾಲ್‌ಗೆ ನೀರು ಪೂರೈಸುವ ಪೈಪು ಒಡೆದು ನೀರು ಪೋಲಾಗುತ್ತಿದೆ.
ಹುನಗುಂದ ತಾಲೂಕಿನ ಧನ್ನೂರ ಗ್ರಾಮದ ಜಾಕವೆಲ್‌ನಿಂದ ತೋರಣಗಲ್ ಜಿಂದಾಲ್ ಫ್ಯಾಕ್ಟರಿಗೆ ನೀರನ್ನು ಬಿಡುವ ವ್ಯವಸ್ಥೆ ಮಾಡಲಾಗಿದ್ದು ಈ ಯೋಜನೆಯಲ್ಲಿ ಹಾಕಿದ ದೊಡ್ಡ ಪೈಪೊಂದು ಒಡೆದು ಹೊಲದಲ್ಲಿ ನೀರು ಹರಿಯುತ್ತಿದೆ. ನೀರು ಸಾಕಷ್ಟು ಪ್ರಮಾಣದಲ್ಲಿ ಪೋಲಾಗುತ್ತಿದ್ದು ಅಧಿಕಾರಿಗಳು ಇತ್ತ ಕೂಡಲೇ ಗಮನ ಹರಿಸಬೇಕಾಗಿದೆ.
ಕುಡಿಯುವ ನೀರು ಸರಿಯಾಗಿ ಬರುತ್ತಿಲ್ಲ ಎಂದು ಸೋಮವಾರದಂದು ಮುಂಜಾನೆಯೇ ಅಲಂಪೂರಪೇಟೆಯ ಜನ ಖಾಲಿ ಕೊಡಗಳ ಮೆರವಣಿಗೆಯನ್ನು ನಗರದ ಪ್ರಮುಖ ಬೀದಿಗಳಲ್ಲಿ ಮಾಡಿದ್ದು ಮಧ್ಯಾಹ್ನ ಸಮೀಪದ ಗೊರಬಾಳ ಗ್ರಾಮದಿಂದ ನೀರು ಪೋಲಾಗುತ್ತಿರುವ ಸುದ್ದಿ ಇಲ್ಲಿನ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

Exit mobile version