Home ಅಪರಾಧ ಸ್ವೀಡನ್‌ನಲ್ಲಿ ಕುರಾನ್ ಸುಟ್ಟ ಆರೋಪಿ ಮೊಮಿಕ್ ಹತ್ಯೆ

ಸ್ವೀಡನ್‌ನಲ್ಲಿ ಕುರಾನ್ ಸುಟ್ಟ ಆರೋಪಿ ಮೊಮಿಕ್ ಹತ್ಯೆ

0

ಸ್ಟಾಕ್‌ಹೋಮ್: ಸ್ವೀಡನ್‌ನ ಸ್ಟಾಕ್‌ಹೋಮ್ ಮಸೀದಿಯ ಹೊರಗಡೆ ೨೦೨೩ರಲ್ಲಿ ಕುರಾನ್ ಸುಟ್ಟುಹಾಕಿದ ಇರಾನ್ ಮೂಲದ ಸಲ್ವಾನ್ ಮೊಮಿಕ್(೩೮) ಎಂಬಾತನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಸ್ಟಾಕ್‌ಹೋಮ್‌ನ ಸೊಡೆರ್ಟಾಲ್ಜೆ ಎಂಬಲ್ಲಿರುವ ಅಪಾರ್ಟ್ಮೆಂಟ್‌ನಲ್ಲಿ ಈತನನ್ನು ಬುಧವಾರ ಸಂಜೆ ಹತ್ಯೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಐವರನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಗುಂಡೇಟಿಗೆ ಬಲಿಯಾದ ಸಮಯದಲ್ಲಿ ಮೊಮಿಕ್ ಲೈವ್‌ಸ್ಟ್ರೀಮ್‌ನಲ್ಲಿದ್ದರು. ೨೦೨೩ರಲ್ಲಿ ಆತ ಇಸ್ಲಾಂ ವಿರುದ್ಧ ಸರಣಿ ಪ್ರತಿಭಟನೆಗಳನ್ನು ನಡೆಸುವ ಮೂಲಕ ಮುಸ್ಲಿಮ್ ಬಾಹುಳ್ಯ ದೇಶಗಳ ಆಕ್ರೋಶಕ್ಕೆ ಗುರಿಯಾಗಿದ್ದರು. ವಾಕ್‌ಸ್ವಾತಂತ್ರ್ಯದ ಕಾನೂನಿನಡಿಯಲ್ಲಿ ಮೊಮಿಕ್‌ಗೆ ಪ್ರತಿಭಟನೆ ನಡೆಸಲು ಸ್ವೀಡನ್ ಸರ್ಕಾರ ಅನುಮತಿ ನೀಡಿತ್ತು.

Exit mobile version