Home ತಾಜಾ ಸುದ್ದಿ ಸೀಟು ಕೊಡಿಸುವುದಾಗಿ ವಂಚಿಸುವವರ ಬಗ್ಗೆ ಎಚ್ಚರ ಇರಲಿ

ಸೀಟು ಕೊಡಿಸುವುದಾಗಿ ವಂಚಿಸುವವರ ಬಗ್ಗೆ ಎಚ್ಚರ ಇರಲಿ

0

ಬೆಂಗಳೂರು: ವೈದ್ಯಕೀಯ ಸೀಟು ಕೊಡಿಸುವುದಾಗಿ ವಂಚಿಸುವವರ ಬಗ್ಗೆ ಎಚ್ಚರ ಇರಲಿ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎಚ್ಚರಿಸಿದೆ.


ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಎಚ್ಚರಿಕೆಯ ಸಂದೇಶ ನೀಡಿದ್ದಾರೆ ಇಲ್ಲಿ ಗಮನಿಸಿ.. ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ ಕೋರ್ಸ್ ಗಳ ಸೀಟು ಕೊಡಿಸುವುದಾಗಿ ಹೇಳಿ ವಂಚಿಸುವವರ ಬಗ್ಗೆ ಎಚ್ಚರ ಇರಲಿ. ಸರ್ಕಾರಿ, ಖಾಸಗಿ, ಮ್ಯಾನೇಜ್ಮೆಂಟ್, ಎನ್.ಆರ್.ಐ ಹೀಗೆ ಎಲ್ಲ ಕೋಟಾಗಳ ಸೀಟು ಹಂಚಿಕೆ ಮೆರಿಟ್ ಆಧಾರದ ಮೇಲೆ ಕೆಇಎ ವತಿಯಿಂದಲೇ ಆಗುತ್ತದೆ ಎಂದಿದ್ದಾರೆ.

Exit mobile version