Home ಅಪರಾಧ ಸಿಡಿಲಿಗೆ ಹೊತ್ತಿ ಉರಿದ ವಾಹನ

ಸಿಡಿಲಿಗೆ ಹೊತ್ತಿ ಉರಿದ ವಾಹನ

0

ರಾಯಚೂರು; ಜಿಲ್ಲೆಯಲ್ಲಿ ಗುಡುಗು ಸಿಡಿಲು ಸಹಿತ ಮಳೆ ಸಿಡಿಲಿನಿಂದಾಗಿ ಹೊತ್ತಿ ಉರಿದ ಬುಲೆರೋ ವಾಹನ ದೇವದುರ್ಗ ತಾಲೂಕು ಗಾಣದಾಳ ಗ್ರಾಮದ ಜಮೀನಿನಲ್ಲಿ ಶುಕ್ರವಾರ ರಾತ್ರಿ ಘಟನೆ ದೇವದುರ್ಗ ತಾಲ್ಲೂಕಿನ ಸೋಮನಮರಡಿ ಗ್ರಾಮದ ಹನುಮಂತ್ರಾಯ ಗಣಜಲಿ ಎಂಬುವವರಿಗೆ ಸೇರಿದ ವಾಹನವಾಗಿದೆ.
ವಾಹನದ ಪಕ್ಕದಲ್ಲಿದ್ದ ಶ್ರೀಧರ, ಪ್ರವೀಣ, ಹನುಮಂತಿ, ಲಕ್ಷ್ಮೀ, ಗೋಪಾಲನಾಯಕ, ಬಸವರಾಜ, ಹನುಮಗೌಡ ಎಂಬುವವರಿಗೂ ಸಿಡಿಲಿನ ಶಖ(ಬಿಸಿ)ತಗುಲಿದ
ತೆಂಗಿನಮರದ ಕೆಳಗೆ ಬುಲೆರೋ ವಾಹನವನ್ನು ನಿಲ್ಲಿಸಿದ್ದರು. ಸಿಡಿಲು ಮೊದಲು ತೆಂಗಿನಮರಕ್ಕೆ ಬಿದ್ದು ಅದರ ಕಿಡಿ ಪಕ್ಕದ ಹುಲ್ಲಿನ ಬಣವೆಗೆ ಬೆಂಕಿ ನಂತರ ಪಕ್ಕದಲ್ಲಿ ನಿಲ್ಲಿಸಿದ್ದ ವಾಹನಕ್ಕೂ ಸಹ ತಗುಲಿದೆ ಎಂದು ತಿಳಿದುಬಂದಿದೆ.

Exit mobile version