Home ಅಪರಾಧ ಸಾಲ ಬಾಧೆ: ರೈತ ಆತ್ಮಹತ್ಯೆ

ಸಾಲ ಬಾಧೆ: ರೈತ ಆತ್ಮಹತ್ಯೆ

0

ಹೊಸನಗರ: ಸಾಲ ಬಾಧೆಯಿಂದ ಬೇಸತ್ತ ಕೃಷಿಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಸೊನಲೆ ಗ್ರಾಪಂ ವ್ಯಾಪ್ತಿಯ ವಾರಂಬಳ್ಳಿ ಸಮೀಪದ ಬಾವಿಕೈ ಗ್ರಾಮದಲ್ಲಿ ನಡೆದಿದೆ. ಗಂಗಾಧರ(೩೭) ಮೃತ ರೈತ. ಈತನು ತನ್ನ ವೃದ್ಧ ತಂದೆಯ ಹೆಸರಿನಲ್ಲಿದ್ದ ೨ ಎಕರೆ ಜಮೀನಿನಲ್ಲಿ ಅಡಕೆ, ಭತ್ತ ಬೆಳೆದಿದ್ದ. ಕೃಷಿ ಚಟುವಟಿಕೆ ಉದ್ದೇಶಕ್ಕಾಗಿ ಪಟ್ಟಣದ ಪಿಕಾರ್ಡ್ ಬ್ಯಾಂಕ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಸೇರಿದಂತೆ ಹಲವೆಡೆ ೪.೫೦ ಲಕ್ಷ ರೂ. ಸಾಲ ಮಾಡಿದ್ದ. ಅತಿಯಾದ ಮಳೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಫಸಲು ಬಂದಿರಲಿಲ್ಲ. ಸಾಲದ ತೀರುವಳಿ ಮಾಡುವ ಕುರಿತು ಇತ್ತೀಚೆಗೆ ಚಿಂತಾಕ್ರಾಂತನಾಗಿದ್ದ. ಸಾಲಬಾಧೆಯಿಂದ ಬೇಸತ್ತು ಜಮೀನಿನ ಸಮೀಪ ಇರುವ ಕಾಡು ಜಾತಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ತಂದೆ ಕಮಲಾಕ್ಷ ನೀಡಿದ ದೂರಿನ ಮೇರೆಗೆ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version