Home ತಾಜಾ ಸುದ್ದಿ ಸರ್ಕಾರದ ದುಡ್ಡಲ್ಲಿ ಶಾಸಕರ ದೆಹಲಿ ಟ್ರಿಪ್

ಸರ್ಕಾರದ ದುಡ್ಡಲ್ಲಿ ಶಾಸಕರ ದೆಹಲಿ ಟ್ರಿಪ್

0

ಶಿವಮೊಗ್ಗ: ಕಾಂಗ್ರೆಸ್‌ ಶಾಸಕರು ಬೇರೆ ಪಕ್ಷಕ್ಕೆ ಹೋಗುವ ಭಯದಿಂದ ಶಾಸಕರನ್ನ ಟ್ರಿಪ್ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ರಾಜ್ಯ ಕಾಂಗ್ರೆಸ್ ದೆಹಲಿಯಲ್ಲಿ ಆಯೋಜಿಸಿರುವ ಪ್ರತಿಭಟನೆ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಸರ್ಕಾರ ದೆಹಲಿಯ ಜಂತರ್ ಮಂತರ್​​ನಲ್ಲಿ ನಾಳೆ ಪ್ರತಿಭಟನೆ ಹಮ್ಮಿಕೊಂಡಿದೆ. ಕಾಂಗ್ರೆಸ್​ನಿಂದ ಈ ಹೋರಾಟ ಹಮ್ಮಿಕೊಂಡಿದ್ದರೆ ನಮ್ಮ ಅಭ್ಯಂತರ ಏನೂ ಇಲ್ಲ. ಆದರೆ. ಸರ್ಕಾರದಿಂದ ಪ್ರತಿಭಟನೆ ಮಾಡುತ್ತಿರುವುದು ಸರಕಾರದ ಹಣ ಖರ್ಚು ಮಾಡಲು ಎಂದರು.
ದೆಹಲಿಗೆ ಹೋಗಿ ಬರುವ ಖರ್ಚು, ಊಟ-ತಿಂಡಿ ಎಲ್ಲದಕ್ಕೂ ಸರ್ಕಾರದ ಹಣ ಬಳಕೆ ಮಾಡುತ್ತಾರೆ. ಈ ಮೂಲಕ ಸರ್ಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇದೆಲ್ಲ ಚುನಾವಣಾ ಪ್ರಚಾರಕ್ಕೆ ಮಾಡುತ್ತಿರುವ ಕುತಂತ್ರ ಎಂದು ಆಕ್ರೋಶ ಹೊರಹಾಕಿದರು.

Exit mobile version