Home ತಾಜಾ ಸುದ್ದಿ ಸರ್ಕಾರಗಳ‌ ನಡೆ ಖಂಡಿಸಿ ರೈತರಿಂದ ತಮಟೆ ಪ್ರತಿಭಟನೆ

ಸರ್ಕಾರಗಳ‌ ನಡೆ ಖಂಡಿಸಿ ರೈತರಿಂದ ತಮಟೆ ಪ್ರತಿಭಟನೆ

0

ಶ್ರೀರಂಗಪಟ್ಟಣ: ತಮಿಳುನಾಡಿಗೆ ನೀರು ಬಿಟ್ಟ ರಾಜ್ಯ ಸರ್ಕಾರ ಹಾಗೂ ಮದ್ಯ ಪ್ರವೇಶಿಸಿಸದ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಶ್ರೀರಂಗಪಟ್ಟಣದಲ್ಲಿ‌ ರೈತರು‌ ತಮಟೆ ಪ್ರತಿಭಟನೆ ನಡೆಸಿದರು.
ಪಟ್ಟಣದ ಕುವೆಂಪು ವೃತ್ತದ ಬಳಿಯ ಬೆಂಗಳೂರು- ಮೈಸೂರು ಹೆದ್ದಾರಿ ಬಳಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಅನಿರ್ಧಿಷ್ಟಾವಧಿ‌‌ ಧರಣಿ ಮುಂದುವರೆದಿದ್ದು,‌‌ ಜಿಲ್ಲಾಧ್ಯಕ್ಷ ಕೆಂಪೂಗೌಡ, ತಾಲ್ಲೂಕು ಅಧ್ಯಕ್ಷ ಮರಳಾಗಾಲ ಕೃಷ್ಣೇಗೌಡ ನೇತೃತ್ವದಲ್ಲಿ ತಮಟೆ ಪ್ರತಿಭಟನೆ ನಡೆಯಿತು.


ಪಟ್ಟಣದ ಮುಖ್ಯರಸ್ತೆ ಮಾರ್ಗವಾಗಿ ಅಂಬೇಡ್ಕರ್ ವೃತ್ತದ ವರೆಗೂ ತಮಟೆ ಬಾರಿಸಿಕೊಂಡು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿದ ರೈತರು,‌‌‌ ಕಾವೇರಿ ನೀರು ಹಂಚಿಕೆ ವಿಷಯವಾಗಿ ಕರ್ನಾಟಕಕ್ಕೆ ಒಂದು ಕಾನೂನು,‌‌ ದೇಶಕ್ಕೆ ಮತ್ತೊಂದು ಕಾನೂನು ಇರುವುದಾಗಿ ಕಿಡಿಕಾರಿದರು.

Exit mobile version