Home ತಾಜಾ ಸುದ್ದಿ ಸತತ 3ನೇ ಬಾರಿಗೆ ಪುನರಾಯ್ಕೆ: ಚೀನಾ ಅಧ್ಯಕ್ಷರಾಗಿ ಷಿ ಜಿನ್​ಪಿಂಗ್

ಸತತ 3ನೇ ಬಾರಿಗೆ ಪುನರಾಯ್ಕೆ: ಚೀನಾ ಅಧ್ಯಕ್ಷರಾಗಿ ಷಿ ಜಿನ್​ಪಿಂಗ್

0
Xi Jinping

ಬೀಚಿಂಗ್: ಚೀನಾ ಅಧ್ಯಕ್ಷರಾಗಿ ಷಿ ಜಿನ್​ಪಿಂಗ್ ಸತತ 3ನೇ ಬಾರಿಗೆ ಪುನರಾಯ್ಕೆಯಾಗಿದ್ದಾರೆ. ತಮ್ಮ ಅಯ್ಕೆ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿರುವ ಅಧ್ಯಕ್ಷ ಷಿ ಜಿನ್‌ಪಿಂಗ್‌ ‘ಜಗತ್ತಿಗೆ ಈಗ ಚೀನಾದ ಅಗತ್ಯವಿದೆ’ ಎಂದು ಘೋಷಿಸಿದರು. ನಮ್ಮ ಪಕ್ಷ ಮತ್ತು ನಮ್ಮ ಜನರ ವಿಶ್ವಾಸ ಕಾಪಾಡಿಕೊಳ್ಳುವ ರೀತಿಯಲ್ಲಿ ಕೆಲಸ ಮಾಡುತ್ತೇನೆ’ ಎಂದು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು. ಚೀನಾದ ಸಶಸ್ತ್ರ ಪಡೆಗಳನ್ನು ನಿರ್ವಹಿಸುವ ಅಧಿಕಾರ ಹೊಂದಿರುವ ‘ಸೆಂಟ್ರಲ್ ಮಿಲಿಟರಿ ಕಮಿಷನ್’ ಮುಖ್ಯಸ್ಥರಾಗಿಯೂ ಷಿ ಜಿನ್​ಪಿಂಗ್ ಮರುನೇಮಕವಾದ ಘೋಷಣೆಯನ್ನೂ ಇದೇ ಸಂದರ್ಭದಲ್ಲಿ ಪ್ರಕಟಿಸಲಾಯಿತು.

Exit mobile version