Home ನಮ್ಮ ಜಿಲ್ಲೆ ಪಿಎಫ್ಐ ಮತ್ತು ಎಸ್ಡಿಎಫ್ ಅಧ್ಯಕ್ಷರ ಮನೆಯ ಮೇಲೆ ಪೊಲೀಸರ ದಾಳಿ

ಪಿಎಫ್ಐ ಮತ್ತು ಎಸ್ಡಿಎಫ್ ಅಧ್ಯಕ್ಷರ ಮನೆಯ ಮೇಲೆ ಪೊಲೀಸರ ದಾಳಿ

0
ಇಳಕಲ್

ಇಳಕಲ್: ನಗರದ ಪಿಎಫ್ಐ ಮತ್ತು ಎಸ್‌ಡಿಎಫ್‌ ಸಂಘ ಸಂಘಟನೆಗಳ ಅಧ್ಯಕ್ಷರ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದರು.
ಸಿಪಿಐ ಸುರೇಶ ಬಂಡೆಗುಂಬಳ ನೇತೃತ್ವದಲ್ಲಿ ಮೂರು ವಾಹನಗಳಲ್ಲಿ ಅಲಂಪೂರಪೇಟೆಯಲ್ಲಿ ಇರುವ ಇಬ್ಬರು ಅಧ್ಯಕ್ಷರಾದ ರಿಯಾಜ ಮತ್ತು ರಫೀಕ್ ಮನೆಗಳ ಮೇಲೆ ದಾಳಿ ನಡೆಸಿ ತಪಾಸಣೆ ಕೈಗೊಂಡರು.
ಹುನಗುಂದ ನ್ಯಾಯಾಲಯದಿಂದ ಸರ್ಚ ವಾರಂಟ್‌ ತೆಗೆದುಕೊಂಡು ನಡೆಸಿದ ಈ ದಾಳಿಯಲ್ಲಿ ಏನೇನು ದೊರಕಿತು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ ಆದರೆ ಎರಡೂ ಮನೆಗಳಲ್ಲಿ ಸಂಬಂಧಿಸಿದ ಅಧ್ಯಕ್ಷರು ಇರಲಿಲ್ಲ ಎಂದು ಹೇಳಲಾಗಿದೆ.

Exit mobile version