Home ನಮ್ಮ ಜಿಲ್ಲೆ ಕೊಪ್ಪಳ ಶ್ರೀರಕ್ಷಾಗೆ ವಿಶ್ವಮಿತ್ರಾ ಪ್ರತಿಭಾ ಪುರಸ್ಕಾರ ಪ್ರದಾನ

ಶ್ರೀರಕ್ಷಾಗೆ ವಿಶ್ವಮಿತ್ರಾ ಪ್ರತಿಭಾ ಪುರಸ್ಕಾರ ಪ್ರದಾನ

0

ಕೊಪ್ಪಳ: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 97.6ರಷ್ಟು ಫಲಿತಾಂಶ ಪಡೆದ ನಗರದ ಪ್ರಶಾಂತ ಕಾಲೋನಿಯ ಶ್ರೀರಕ್ಷಾ ಜಹಗೀರದಾರಗೆ ಬೆಂಗಳೂರಿನಲ್ಲಿ ಶುಕ್ರವಾರ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವತಿಯಿಂದ ನಡೆದ 2023–24ನೇ ಸಾಲಿನ ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ ಲಭಿಸಿತು.

ನಗರದ ನ್ಯೂ ಆಕ್ಸ್‌ಫರ್ಡ್‌ ಶಾಲೆಯ ವಿದ್ಯಾರ್ಥಿನಿ ಶ್ರೀರಕ್ಷಾ ಇಂಗ್ಲಿಷ್‌ನಲ್ಲಿ 119, ಕನ್ನಡ ಹಾಗೂ ಹಿಂದಿ ವಿಷಯದಲ್ಲಿ ಪೂರ್ಣ ನೂರು ಅಂಕಗಳನ್ನು ಗಳಿಸಿದ್ದರು. ಮಗಳ ಪರವಾಗಿ ತಾಯಿ ವೀಣಾ ಜಹಗೀರದಾರ್‌ ಗೌರವ ಸ್ವೀಕರಿಸಿದರು.

Exit mobile version