Home ತಾಜಾ ಸುದ್ದಿ ಶೋಕದಲ್ಲಿ ಸಂಭ್ರಮ ಬೇಡ

ಶೋಕದಲ್ಲಿ ಸಂಭ್ರಮ ಬೇಡ

0

ಬಾಗಲಕೋಟೆ: ಹಿಂದೂ ಸಂಸ್ಕೃತಿಗೆ ವಿರುದ್ಧವಾಗಿರುವ ಡಿ. ೩೧ರ ಹೊಸ ವರ್ಷಾಚರಣೆಯನ್ನು ಸರ್ಕಾರ ರದ್ದುಪಡಿಸಬೇಕೆಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಒತ್ತಾಯಿಸಿದ್ದಾರೆ.
ಶನಿವಾರ ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಸಂಪ್ರದಾಯದ ಪ್ರಕಾರ ಯುಗಾದಿ ಹೊಸ ವರ್ಷ. ವೈಜ್ಞಾನಿಕವಾಗಿ ಪಂಚಾಂಗವನ್ನು ಆಧರಿಸಿ ಆಗ ಹೊಸ ವರ್ಷಾಚರಣೆ ಮಾಡಲಾಗುತ್ತದೆ. ಅದನ್ನು ಬಿಟ್ಟು ಕುಡಿದು ಕುಪ್ಪಳ್ಳಿ, ಹೆಣ್ಣು ಹುಡುಗಿಯರನ್ನು ಹಾಳು ಮಾಡುವುದು ನಮ್ಮ ಆಚರಣೆ ಆಗಲು ಸಾಧ್ಯವಿಲ್ಲ. ಬ್ರಟಿಷ್ರು, ಕ್ರಿಶ್ಚಿಯನ್ನರು ಹಾಕಿದ ಪರಂಪರೆ ಅವೈಜ್ಞಾನಿಕವಾಗಿದ್ದು, ಹಿಂದೂಗಳು ಈ ಆಚರಣೆಯಲ್ಲಿ ಭಾಗಿಯಾಗಬಾರದು ಎಂದು ಆಗ್ರಹಿಸಿದರು.
ಮಾಜಿ ಪ್ರಧಾನಿ ದಿ. ಮನಮೋಹನಸಿಂಗ್ ನಿಧನದ ಪ್ರಯುಕ್ತ ದೇಶದಲ್ಲಿ ಶೋಕಾಚರಣೆಯಿದ್ದು, ಇಂಥ ಸಂದರ್ಭದಲ್ಲಿ ಹೊಸ ವರ್ಷಾಚರಣೆ ಮಾಡುವುದಕ್ಕೆ ಅವಕಾಶ ನೀಡಬಾರದು. ಆಚರಣೆ ನಡೆಯುವ ಕಡೆಗಳಲ್ಲಿ ನಾವು ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಹೊಸ ವರ್ಷಾಚರಣೆ ದಿನದಂದು ಬಾರ್‌ಗಳನ್ನು ಬಂದ್ ಮಾಡಬೇಕೆಂದು ಒತ್ತಾಯಿಸಿದರು.

ಜಮೀರ್ ಮತಾಂಧ:
ವಕ್ಫ್ ವಿವಾದ ಕುರಿತಾಗಿ ಪ್ರತಿಕ್ರಿಯಿಸಿದ ಅವರು ಹಿಂದೂಗಳ ಜಾಗಗಳನ್ನು ಗುರಿಯಾಗಿಸಿದ ಸಚಿವ ಜಮೀರ್ ಅಹ್ಮದ್ ಒಬ್ಬ ನಾಲಾಯಕ, ನೂರಕ್ಕೆ ನೂರರಷ್ಟು ಆತ ಮತಾಂಧ ವ್ಯಕ್ತಿ. ವಕ್ಫ್ ಬೋರ್ಡ್ ಅತ್ಯಂತ ಅಪಾಯಕಾರಿಯಾಗಿದೆ. ಮುಸ್ಲಿಂ ತುಷ್ಟೀಕರಣದ ಹಿನ್ನೆಲೆ ಕೈ ಸರ್ಕಾರವೇ ಆ ಮಂಡಳಿಯನ್ನು ತಂದಿದೆ. ಸಂವಿಧಾನವನ್ನು ಮೀರಿ ವಕ್ಫ್ ಬೋಡ್‌ಗೆ ಅಧಿಕಾರ ನೀಡಿರುವುದು ಭಯಾನಕ, ಅಲ್ಪಸಂಖ್ಯಾತರು ಎಂದರೆ ಕೇವಲ ಮುಸ್ಲಿಂರಲ್ಲ ಅದರಲ್ಲಿ ಕ್ರಿಶ್ಚಿಯನ್, ಪಾರ್ಸಿ, ಸಿಖ್ಖರು, ಬೌದ್ಧರು ಇದ್ದಾರೆ. ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರನ್ನು ಮುಸ್ಲಿಂರನ್ನೇ ಆಯ್ಕೆ ಮಾಡುವುದು ಯಾಕೆಂಬುದು ಈಗಲೂ ಅರ್ಥವಾಗುತ್ತಿಲ್. ಈ ಬಿಜೆಪಿ ಅವರೂ ಅದನ್ನೇ ಮಾಡಿಕೊಂಡು ಬಂದಿದ್ದಾರೆ. ಅದರಿಂದಾಗಿಯೇ ಜಮೀರ್‌ನಂಥವರು ಎದ್ದು ಕೂತಿದ್ದಾರೆ ಎಂದು ದೂರಿದರು.

ಮಠಕ್ಕೆ ನೋಟಿಸ್‌ಗೆ ಆಕ್ಷೇಪ:
ತುಮಕೂರು ಸಿದ್ದಗಂಗಾ ಮಠಕ್ಕೆ ವಿದ್ಯುತ್, ನೀರಿನ ಬಿಲ್ ವಿಚಾರವಾಗಿ ನೋಟಿಸ್ ನೀಡಿರುವುದಕ್ಕೆ ಆಕ್ಷೇಪಿಸಿದ ಪ್ರಮೋದ ಮುತಾಲಿಕ ಅವರು, ಎಷ್ಟು ಮಸೀದಿ, ಚರ್ಚ್ಗಳಿಗೆ ಸರ್ಕಾರ ಈ ರೀತಿ ನೋಟಿಸ್ ನೀಡಿದೆ ಎಂಬುದನ್ನು ಬಹಿರಂಗಪಡಿಸಲಿ. ಹಿಂದೂಗಳನ್ನು ಟಾರ್ಗೆಟ್ ಮಾಡುವುದು ಸರಿಯಲ್ಲ. ಒಂದು ಸರ್ಕಾರದಿಂದ ಮಾಡಲಾಗದ ಕೆಲಸವನ್ನು ಸಿದ್ದಗಂಗಾ ಮಠವು ಮಾಡಿ ತೋರಿಸಿದೆ ಎಂದು ಮುತಾಲಿಕ ಹೇಳಿದರು.

Exit mobile version