Home ಅಪರಾಧ ವ್ಯಕ್ತಿ ಅಪಹರಿಸಿ 20 ಲಕ್ಷ ರೂ. ದೋಚಿದ ದುಷ್ಕರ್ಮಿಗಳು

ವ್ಯಕ್ತಿ ಅಪಹರಿಸಿ 20 ಲಕ್ಷ ರೂ. ದೋಚಿದ ದುಷ್ಕರ್ಮಿಗಳು

0

ಕಲಬುರಗಿ: ವ್ಯಕ್ತಿಯೊಬ್ಬರನ್ನು ಅಪಹರಿಸಿದ ದುಷ್ಕರ್ಮಿಗಳ ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿ ಅವರಿಂದ ೨೦ ಲಕ್ಷ ರೂ. ಪಡೆದ ಘಟನೆ ನಗರದಲ್ಲಿ ನಡೆದಿದೆ.
ನಂದಿಕೂರ ಗ್ರಾಮದ ನಿವಾಸಿ ಮಲ್ಲಯ್ಯ ಸ್ವಾಮಿ ಎಂಬಾತರೆ ಅಪಹರಣಗೊಳಗಾಗಿ ಹಣ ಕಳೆದುಕೊಂಡವರು. ಅಂಬರೀಶ ಅಲಿಯಾಸ್ ಖಾರದಪುಡಿ ಅಂಬ್ಯಾ ಹಾಗೂ ೪-೫ ಜನ ಸೇರಿ ಅಪಹರಣ ಮಾಡಿ ೨೦ ಲಕ್ಷ ಹಣ ಪಡೆದ ಆರೋಪಿಗಳಾಗಿದ್ದಾರೆ.
ಮಲ್ಲಯ್ಯ ಸ್ವಾಮಿ ಜೂಜಾಟ ಆಡಿ ಕೂಡಿಟ್ಟ ಹಣ, ಅತ್ತೆ ಮಾವ ನೀಡಿದ ಹಣ ಹೀಗೆ ಇವರ ಬಳಿ ಒಟ್ಟು ೩೦ ಲಕ್ಷ ಹಣವಿದ್ದು, ೧೦ ಲಕ್ಷ ರೂ. ಬ್ಯಾಂಕಿನಲ್ಲಿಟ್ಟು ಇನ್ನುಳಿದ ೨೦ ಲಕ್ಷ ರೂ. ಮನೆಯಲ್ಲಿಟ್ಟಿದ್ದರು. ಆದರೆ ಕಳೆದ ಕೆಲವು ದಿನಗಳ ಹಿಂದೆ ಮನೆಯ ಮೇಲೆ ಸಪ್ಪಳ ಆಗಿದ್ದರಿಂದ ಮಲ್ಲಯ್ಯ ಸ್ವಾಮಿ ಅವರು ಮನೆಯಲ್ಲಿಟ್ಟ ೨೦ ಲಕ್ಷ ಹಣವನ್ನು ಸಹ ಬ್ಯಾಂಕಿನಿಲ್ಲಿಟ್ಟು ಬಂದಿದ್ದರು.
ಆಗಾಗ ಗ್ರಾಮಕ್ಕೆ ಬಂದು ಜೂಜಾಟವಾಡುತ್ತಿದ್ದ ಅಂಬರೀಶ ಅಲಿಯಾಸ್ ಖಾರದಪುಡಿ ಅಂಬ್ಯಾ ಹಾಗೂ ಇತರರು ಇವರ ಬಳಿ ೩೦ ಲಕ್ಷ ರೂ. ಇರುವ ಕುರಿತು ಮಾಹಿತಿ ಪಡೆದಿದ್ದು ಕಳೆದ ೧೩ರಂದು ಸಂಜೆ ಆಕಾಶವಾಣಿ ಕ್ರಾಸ್ ಹತ್ತಿರದಿಂದ ಮಲ್ಲಯ್ಯ ಸ್ವಾಮಿ ಅವರನ್ನು ಅಪಹರಿಸಿಕೊಂಡು ಹೋಗಿ ಬಸವ ನಗರದ ಕೋಣೆಯಲ್ಲಿ ಕೂಡಿಟ್ಟು ಪಾದಗಳಿಗೆ ಹಲ್ಲೆ ಮಾಡಿದ್ದು ಹಣ ಕೊಡುವಂತೆ ಒತ್ತಾಯ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಸೊಲ್ಲಾಪೂರದ ಬಳಿ ಕರೆದುಕೊಂಡು ಹೋಗಿ ಊಟ ಮಾಡಿಸಿ ನೀನು ಜೂಜಾಟದಲ್ಲಿ ಹಣ ಸೋತಿರುವೆ ಎಂದು ಹೇಳಿ ನಿನ್ನ ಪತ್ನಿಯಿಂದ ೨೦ ಲಕ್ಷ ಹಣ ತರುವಂತೆ ಹೇಳಿದ್ದಾರೆ.
ಹಣ ಬ್ಯಾಂಕಿನಲ್ಲಿರುವುದರಿಂದ ಆರೋಪಿಗಳು ಮಲ್ಲಯ್ಯ ಸ್ವಾಮಿ ಅವರನ್ನು ಕರೆದುಕೊಂಡು ಬ್ಯಾಂಕ್‌ಗೆ ಹೋಗಿದ್ದು, ಖಾರದಪುಡಿ ಅಂಬ್ಯಾ ಇತರರು ಸಿನಿಮಯ ಶೈಲಿಯಲ್ಲಿ ಬ್ಯಾಂಕ್‌ಗೆ ಪ್ರವೇಶ ಮಾಡಿ ಮಲ್ಲಯ್ಯ ಸ್ವಾಮಿ ಅವರ ಪತ್ನಿಯೊಂದಿಗೆ ಸೇರಿ ೨೦ ಲಕ್ಷ ಹಣವನ್ನು ಜೊತೆಗೆ ಬಂದಿದ್ದ ವ್ಯಕ್ತಿಯ ಕೈಯಲ್ಲಿ ಕೊಟ್ಟಿದ್ದರಿಂದ ಅಪಹರಣಕಾರರು ಹಣ ಪಡೆದ ಬಳಿ ಮಲ್ಲಯ್ಯ ಸ್ವಾಮಿ ಅವರನ್ನು ಬಿಟ್ಟು ಹಣದೊಂದಿಗೆ ಪರಾರಿಯಾಗಿದ್ದಾರೆ ಎಂದು ಮಲ್ಲಯ್ಯ ಸ್ವಾಮಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Exit mobile version