Home ತಾಜಾ ಸುದ್ದಿ ವಿಮ್ಸ್ ಘಟನೆಗೆ ಸಚಿವ ಸುಧಾಕರ್​​​​​ ಅವರ ನಿರ್ಧಾರವೇ ಕಾರಣ… ; ಶಾಸಕ ಸೋಮಶೇಖರ್​​ ರೆಡ್ಡಿ…

ವಿಮ್ಸ್ ಘಟನೆಗೆ ಸಚಿವ ಸುಧಾಕರ್​​​​​ ಅವರ ನಿರ್ಧಾರವೇ ಕಾರಣ… ; ಶಾಸಕ ಸೋಮಶೇಖರ್​​ ರೆಡ್ಡಿ…

0

ಬಳ್ಳಾರಿ: ಸಚಿವ ಡಾ. ಕೆ. ಸುಧಾಕರ್ ವಿರುದ್ಧ ಆಕ್ರೋಶ ಭುಗಿಲೆದ್ದಿದ್ದು, ವಿಮ್ಸ್​​ನಲ್ಲಿ ಸರಣಿ ಸಾವಿನ ಬಗ್ಗೆ ಬಿಜೆಪಿಯಲ್ಲೇ ಕಿಚ್ಚು ಹೆಚ್ಚಾಗಿದೆ. ವಿಮ್ಸ್ ಘಟನೆಗೆ ಸಚಿವ ಸುಧಾಕರ್​​​​​ ಅವರ ನಿರ್ಧಾರವೇ ಕಾರಣವಾಗಿದೆ ಎಂದು ಬಿಜೆಪಿ ಶಾಸಕ ಸೋಮಶೇಖರ್​​ ರೆಡ್ಡಿ ಕಿಡಿಕಾರಿದ್ಧಾರೆ.

ಬಳ್ಳಾರಿಯಲ್ಲಿ ಮಾತನಾಡಿದ ಸೋಮಶೇಖರ್​​ ರೆಡ್ಡಿ ಅವರು ನಾವು ಬೇಡ-ಬೇಡ ಅಂದ್ರು ಸುಧಾಕರ್​​ ಅವರು ನಿರ್ದೇಶಕ ಡಾ. ಗಂಗಾಧರ್ ಗೌಡರನ್ನು ನೇಮಿಸಿದ್ದರು. ಅವರಿಗೆ ಯಾವುದೇ ಆಡಳಿತ ಅನುಭವ ಇಲ್ಲ. ಸಿಬ್ಬಂದಿ ಅವರ ಮಾತು ಕೇಳಲ್ಲ ಅಂತಾ ನಾವೇ ಹೇಳಿದ್ವಿ. ಸಚಿವ ಸುಧಾಕರ್ ಯಾರ ಮಾತನ್ನೂ ಕೇಳೋದೇ ಇಲ್ಲ. ನಾವು ಸಿಎಂಗೆ ಈಗಾಗಲೇ ಎಲ್ಲವನ್ನೂ ಹೇಳಿದ್ದೇವೆ ಎಂದು ತಿಳಿಸಿದ್ಧಾರೆ.

Exit mobile version