Home ತಾಜಾ ಸುದ್ದಿ ವಿಟಾಮಿನ್ ಮಾತ್ರೆ, ದಿಂಬು ಬೇಡಿಕೆ ಇಟ್ಟ ವಿಜಯಲಕ್ಷ್ಮೀ

ವಿಟಾಮಿನ್ ಮಾತ್ರೆ, ದಿಂಬು ಬೇಡಿಕೆ ಇಟ್ಟ ವಿಜಯಲಕ್ಷ್ಮೀ

0

ಬಳ್ಳಾರಿ: ಕೊಲೆ ಆರೋಪದಲ್ಲಿ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಬಂಧಿಯಾಗಿರುವ ನಟ ದರ್ಶನ್ ಭೇಟಿಯಾಗಲು ಆಗಮಿಸಿದ್ದ ಪತ್ನಿ ವಿಜಯಲಕ್ಷ್ಮೀ, ಪತಿಗೆ ವಿಟಾಮಿನ್ ಮಾತ್ರೆ ಮತ್ತು ದಿಂಬು ಪೂರೈಸಲು ಬೇಡಿಕೆ ಇಟ್ಟಿದ್ದಾರೆ.
ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಇಬ್ಬರು ವಕೀಲರು ಹಾಗೂ ಮೈದುನ ದಿನಕರ್ ತೂಗದೀಪ ಜತೆ ಗುರುವಾರ ಮಧ್ಯಾಹ್ನ ೧೨.೧೫ಕ್ಕೆ ಆಗಮಿಸಿದ ವಿಜಯಲಕ್ಷ್ಮೀ, ಪತಿ ದರ್ಶನ್ ಜತೆ ಅರ್ಧಗಂಟೆಗೂ ಅಧಿಕ ಕಾಲ ಚರ್ಚೆ ನಡೆಸಿದರು. ಚಾರ್ಜ್ಶೀಟ್ ಹಾಗೂ ಜಾಮೀನು ಕುರಿತಾಗಿ ಚರ್ಚೆ ನಡೆಸಲಾಯಿತು. ದರ್ಶನ್ ಭೇಟಿ ಬಳಿಕ ಜೈಲು ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಈ ಹಿಂದೆ ಎರಡು ಬಾರಿ ಜೈಲಿಗೆ ಬಂದಾಗ ವಿಟಾಮಿನ್ ಮಾತ್ರೆಗಳನ್ನು ದರ್ಶನ್‌ಗೆ ನೀಡಲಾಗಿತ್ತು. ಆದರೆ ಇದುವರೆಗೆ ಅವರಿಗೆ ಯಾಕೆ ನೀಡಿಲ್ಲ ಎಂದು ವಿಜಯಲಕ್ಷ್ಮೀ ಜೈಲು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ವೈದ್ಯರ ಸೂಚನೆ ಇಲ್ಲದೇ ಯಾವ ಮಾತ್ರೆಯನ್ನು ಜೈಲಿನ ಕೈದಿಗಳಿಗೆ ನೀಡುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ ಪತಿಗೆ ಬೆನ್ನು ನೋವಿನ ಸಮಸ್ಯೆ ಇದ್ದು, ದಿಂಬು ಪೂರೈಸಿ, ಟಿವಿ ಬೇಡಿಕೆ ಇಟ್ಟು ಇಷ್ಟು ದಿನಗಳಾದರೂ ಟಿವಿ ನೀಡಿಲ್ಲ. ಟಿವಿ ಕೊಡಿ ಎಂದು ಮತ್ತೊಮ್ಮೆ ವಿಜಯಲಕ್ಷ್ಮೀ ಜೈಲು ಅಧಿಕಾರಿಗಳ ಮುಂದೆ ಮನವಿ ಮಾಡಿದ್ದಾರೆ.

Exit mobile version