Home ತಾಜಾ ಸುದ್ದಿ ಲಾರಿ ಹಾಯ್ದು ೩೩ ಕುರಿ ಸಾವು : ಕುರಿಗಾಹಿಗೆ ತೀವ್ರ ಗಾಯ

ಲಾರಿ ಹಾಯ್ದು ೩೩ ಕುರಿ ಸಾವು : ಕುರಿಗಾಹಿಗೆ ತೀವ್ರ ಗಾಯ

0

ಇಳಕಲ್ : ಸೊಲ್ಲಾಪುರ ಮಂಗಳೂರು ರಾಷ್ಟ್ರೀಯ ಹೆದ್ದಾರಿ ೫೦ ರ ಕಿರಿಯಾಡ್ ಹೋಟೆಲ್ ಸಮೀಪದಲ್ಲಿ ಲಾರಿಯೊಂದು ಹಾಯ್ದು ೩೩ ಕುರಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿದರೆ ಕುರಿಗಾಹಿಯ ಕಾಲು ಮುರಿದು ತೀವ್ರವಾಗಿ ಗಾಯಗೊಂಡ ಘಟನೆ ಶುಕ್ರವಾರದಂದು ಬೆಳಿಗ್ಗೆ ಎರಡು ಗಂಟೆಯ ಸುಮಾರಿಗೆ ನಡೆದಿದೆ. ರಾತ್ರಿಯ ಸಮಯದಲ್ಲಿ ರಸ್ತೆಯಲ್ಲಿ ಹೊರಟ ಕುರಿಗಳು ಕಾಣದೇ ಈ ದುರಂತ ಘಟನೆ ನಡೆದಿದೆ. ಸುಮಾರು ೩೦ ಕ್ಕೂ ಹೆಚ್ಚು ಕುರಿಗಳು ಗಾಯಗೊಂಡಿವೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೊಡಕೇಲ್ ಗ್ರಾಮದ ಕುರಿಗಾಹಿ ರಾಯಪ್ಪ ಕಾಲು ಮುರಿದು ಕೊಂಡು ಬಾಗಲಕೋಟೆ ಸರಕಾರಿ ಆಸ್ಪತ್ರೆಗೆ ಸೇರಿದ್ದಾನೆ. ಇಳಕಲ್ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಪಿಎಸ್ ಐ ಮಲ್ಲು ಸತ್ತಿಗೌಡರ ಲಾರಿ ಚಾಲಕನನ್ನು ಬಂಧಿಸಿ ಲಾರಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

Exit mobile version