Home ಸುದ್ದಿ ದೇಶ ರಾಮ ಮಂದಿರ ಉದ್ಘಾಟನೆಯಲ್ಲಿ ಭಾಗವಹಿಸುತ್ತಿಲ್ಲ ಎಲ್‌ಕೆ ಅಡ್ವಾಣಿ

ರಾಮ ಮಂದಿರ ಉದ್ಘಾಟನೆಯಲ್ಲಿ ಭಾಗವಹಿಸುತ್ತಿಲ್ಲ ಎಲ್‌ಕೆ ಅಡ್ವಾಣಿ

0

ಅಯೋಧ್ಯೆ: ರಾಮ ಮಂದಿರ ಉದ್ಘಾಟನೆಯಲ್ಲಿ ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ಭಾಗವಹಿಸುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಉತ್ತರಪ್ರದೇಶದ ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮನ ಮೂರ್ತಿ ಪ್ರಾಣಪ್ರತಿಷ್ಠಾಪನಾ ಕಾರ್ಯ ನಡೆಯಲಿದ್ದು. ಈ ಬೃಹತ್ ಸಮಾರಂಭಕ್ಕೆ ಎಲ್‌ಕೆ ಅಡ್ವಾಣಿ ಸೇರಿದಂತೆ ಬಿಜೆಪಿಯ ಹಲವಾರು ರಾಜಕೀಯ ಗಣ್ಯರಿಗೆ ಆಹ್ವಾನಿಸಲಾಗಿತ್ತು. ಆದರೆ ಎಲ್‌ಕೆ ಅಡ್ವಾಣಿ ಅವರು ಈ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ. ತೀವ್ರ ಚಳಿಯಿಂದಾಗಿ ಕೊನೆಯ ಕ್ಷಣದಲ್ಲಿ ಅಡ್ವಾಣಿಯವರ ಅಯೋಧ್ಯೆ ಪ್ರಯಾಣ ರದ್ದಾಗಿದೆ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ಚಳವಳಿಯಲ್ಲಿ ಅಡ್ವಾಣಿ ಕೂಡ ಪ್ರಮುಖ ವ್ಯಕ್ತಿ. 96 ನೇ ವಯಸ್ಸಿನಲ್ಲಿಯೂ ಆಹ್ವಾನ ಸ್ವೀಕರಿಸಿ ಅಯೋಧ್ಯೆಗೆ ತೆರಳಲು ಸಿದ್ಧರಾಗಿದ್ದರು.

Exit mobile version