Home ತಾಜಾ ಸುದ್ದಿ ರಾಕಸಕೊಪ್ಪ ಜಲಾಶಯಕ್ಕೆ ಭಾಗಿನ ಅರ್ಪಣೆ

ರಾಕಸಕೊಪ್ಪ ಜಲಾಶಯಕ್ಕೆ ಭಾಗಿನ ಅರ್ಪಣೆ

0

ಬೆಳಗಾವಿ: ಬೆಳಗಾವಿ ಮಹಾನಗರಕ್ಕೆ ಕುಡಿಯುವ ನೀರು ಪೂರೈಸುವ ರಾಕಸಕೊಪ್ಪ ಜಲಾಶಯ ತುಂಬಿರುವ ಹಿನ್ನೆಲೆ ಮಂಗಳವಾರ ಪಾಲಿಕೆ ಮೇಯರ್, ಉಪಮೇಯರ್, ಸದಸ್ಯರು, ಆಯುಕ್ತರು, ಅಧಿಕಾರಿಗಳು ಗಂಗಾಪೂಜೆ ಸಲ್ಲಿಸಿ ಭಾಗಿನ ಅರ್ಪಿಸಿದರು.
ಕಳೆದ ಮೂರು ವಾರಗಳಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ರಾಕಸಕೊಪ್ಪ ಜಲಾಶಯ ಭರ್ತಿಯಾಗಿದೆ. ಸಂಪ್ರದಾಯ ಪ್ರಕಾರ ಪ್ರತಿ ವರ್ಷದಂತೆಯೇ ಗಂಗಾಪೂಜಿ ನೆರವೇರಿಸಿ ವರ್ಷವೀಡಿ ಬೆಳಗಾವಿ ಮಹಾನಗರಕ್ಕೆ ಪೂರೈಕೆಯಾಗುವಷ್ಟು ನೀರು ಸಂಗ್ರಹವಾಗಿರಲಿ ಎಂದು ಪಾಲಿಕೆ ಸದಸ್ಯರು ಪ್ರಾರ್ಥಿಸಿದರು.
ಮೇಯರ್ ಶೋಭಾ ಸೋಮನಾಚೆ, ಉಪಮೇಯರ್ ರೇಷ್ಮಾ ಪಾಟೀಲ, ಸ್ಥಾಯಿ ಸಮಿತಿ ಅಧ್ಯಕ್ಷರಾದ ವಾಣಿ ವಿಲಾಸ ಜೋಶಿ, ರವಿ ಧೋತ್ರೆ, ವೀಣಾ ವಿಜಾಪುರೆ, ಸವಿತಾ ಪಾಟೀಲ, ಆಡಳಿತ ಪಕ್ಷದ ನಾಯಕ ರಾಜಶೇಖರ ಡೋಣಿ, ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಪಾಲಿಕೆ ಸದಸ್ಯರು, ಅಧಿಕಾರಿಗಳು ಇದ್ದರು.

Exit mobile version