Home ಅಪರಾಧ ಯೂಟ್ಯೂಬ್ ಪತ್ರಕರ್ತನ ಮೇಲೆ ಹಲ್ಲೆ

ಯೂಟ್ಯೂಬ್ ಪತ್ರಕರ್ತನ ಮೇಲೆ ಹಲ್ಲೆ

0

ಮಂಡ್ಯ: ಪತ್ರಕರ್ತರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಅಶೋಕ ನಗರದಲ್ಲಿ ನಡೆದಿದೆ.
ಯೂಟ್ಯೂಬ್ ಚಾನೆಲ್‌ವೊಂದರ ಪತ್ರಕರ್ತ ಜಯಕುಮಾರ್(38) ಎಂಬ ವ್ಯಕ್ತಿಗೆ ಗಂಭೀರ ಗಾಯವಾಗಿದೆ.
ಜಯಕುಮಾರ್ ಮನೆಯ ಮುಂದೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದು, ಜಯಕುಮಾರ್‌ಗೆ ಕೈ ಮತ್ತು ತಲೆಗೆ ಗಂಭೀರ ಗಾಯವಾಗಿದೆ. ಸದ್ಯ ಗಾಯಾಳುವನ್ನು ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version