Home ತಾಜಾ ಸುದ್ದಿ ಮೋದಿ ಜನರಿಗೆ ಕೊಟ್ಟಿರುವುದು ಖಾಲಿ ಚೊಂಬು

ಮೋದಿ ಜನರಿಗೆ ಕೊಟ್ಟಿರುವುದು ಖಾಲಿ ಚೊಂಬು

0

ಬಳ್ಳಾರಿ : ಭಾರತೀಯ ಚೊಂಬು ಪಾರ್ಟಿ, ನರೇಂದ್ರ ಮೋದಿ ಪಕ್ಷ ಜನರಿಗೆ ಖಾಲಿ ಚೊಂಬು ಕೊಟ್ಟಿದೆ ಎಂದು ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.
ನಗರದ ಪುರಸಭಾ ಕಾಲೇಜು ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಂಡ ಬೃಹತ್ ಸಮಾವೇಶದಲ್ಲಿ ಬಳ್ಳಾರಿ, ಕೊಪ್ಪಳ ಲೋಕಸಭಾ ಅಭ್ಯರ್ಥಿಗಳ ಪರ ಮತ ಯಾಚನೆ ಮಾಡಿದ ಅವರು ತಮ್ಮ ಮಾತಿನಲ್ಲಿ ಪದೇ ಪದೇ ಚೊಂಬು, ಖಾಲಿ ಚೊಂಬು ಪಾರ್ಟಿ ಎಂದು ಟೀಕಿಸಿದರು.
ನರೇಂದ್ರ ಮೋದಿ ಅವರು ಕೇವಲ ೨೦ ಕೋಟ್ಯಾಧಿಪತಿಗೆ ದೇಶದ ಸಂಪತ್ತು ಹಂಚುತ್ತಿದ್ದಾರೆ. ನಮ್ಮ ಸರ್ಕಾರ ಬಂದ ಮೇಲೆ ಇದೇ ಹಣವನ್ನು ನಾವು ಬಡವರಿಗೆ ನೀಡುತ್ತೇವೆ. ನಮ್ಮ ಸರ್ಕಾರ ಬಂದ್ರೆ ನಾವು ವರ್ಷಕ್ಕೆ ಪ್ರತಿ ಬಡ ಕುಟುಂಬಕ್ಕೆ ಮಾಸಿಕ ೮.೫ ಸಾವಿರ ರೂ. ಸಹಾಯ ಧನದಂತೆ ವರ್ಷಕ್ಕೆ ೧ ಲಕ್ಷ ರೂಪಾಯಿ ನೀಡಲಿದ್ದೇವೆ ಎಂದು ವಾಗ್ದಾನ ಮಾಡಿದರು.

Exit mobile version