Home ನಮ್ಮ ಜಿಲ್ಲೆ ಕೊಪ್ಪಳ ಮನುಷ್ಯನ ದೇಹ ದೇವರ ಅದ್ಭುತ ಸೃಷ್ಟಿ

ಮನುಷ್ಯನ ದೇಹ ದೇವರ ಅದ್ಭುತ ಸೃಷ್ಟಿ

0

ಕುಷ್ಟಗಿ: ಮನುಷ್ಯನ ದೇಹ ದೇವರ ಅದ್ಭುತ ಸೃಷ್ಟಿ. ಮನುಷ್ಯರಿಗೆ ಕಷ್ಟಗಳು ಬರುತ್ತವೆ. ಅಂತಹ ಕಷ್ಟಗಳನ್ನು ಸಮರ್ಥವಾಗಿ ಎದುರಿಸಲು ಮುಂದಾಗಬೇಕು ಎಂದು ಕೊಪ್ಪಳದ ಅಭಿನವ ಗವಿಶ್ರೀ ಹೇಳಿದರು.
ಪಟ್ಟಣದ ಕಲ್ಮಠದಲ್ಲಿ ಚನ್ನಬಸವ ಶಿವಯೋಗಿಗಳ ಅಡ್ಡಪಲ್ಲಕ್ಕಿ ಮಹೋತ್ಸವ ನಿಮಿತ್ತ ನಡೆಯುತ್ತಿರುವ ಪುರಾಣ ಪ್ರವಚನ ಕಾರ್ಯಕ್ರದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ದೇಹ ಅಂದ ಮೇಲೆ ಅನಾರೋಗ್ಯ, ಜೀವನ ಅಂದ ಮೇಲೆ ಕಷ್ಟಗಳು ಸಾಮಾನ್ಯ. ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಧೈರ್ಯದಿಂದ ಎದುರಿಸಬೇಕು. ಸೂರ್ಯನ ತಾಪ ಹೆಚ್ಚೆಂದು ಸೂರ್ಯನನ್ನೇ ನಾಶ ಮಾಡಲು ಸಾಧ್ಯವಿಲ್ಲ. ತಾಪ ಕಡಿಮೆ ಮಾಡಲು ಕೊಡೆ ಹಿಡಿಯುತ್ತವೆ. ಹಾಗೇ ಕಷ್ಟಗಳನ್ನೂ ನಾಶ ಮಾಡಲು ಸಾಧ್ಯವಿಲ್ಲ ಎಂದರು.
ಶ್ರೀಮಠದ ನಿಯೋಜಿತ ಪಟ್ಟಾಧಿಕಾರಿ ವಿಶ್ವಾರಾಧ್ಯ ದೇವರು, ದೇವೇಂದ್ರಪ್ಪ ಬಳೂಟಗಿ, ಮಹಾಂತಯ್ಯ ಅರಲಿಮಠ, ಮಹಾಂತಯ್ಯ ಹಿರೇಮಠ, ಕೆ.ಮಹೇಶ ಹಾಗೂ ಅನೇಕರು ಇದ್ದರು.

Exit mobile version