Home ಅಪರಾಧ ಮದುವೆಗೆ ಬಂದ ಯುವಕರು ಸಮುದ್ರ ಪಾಲು

ಮದುವೆಗೆ ಬಂದ ಯುವಕರು ಸಮುದ್ರ ಪಾಲು

0

ಕುಂದಾಪುರ: ಸಮುದ್ರದಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲದ ಘಟನೆ ಇಂದು ಬೆಳಿಗ್ಗೆ ಕೋಟೇಶ್ವರದ ಬೀಜಾಡಿಯ ಅಮಾವಾಸ್ಯೆ ಕಡು ಎಂಬಲ್ಲಿ ಸಂಭವಿಸಿದೆ.
ಇಲ್ಲಿ ನಡೆಯುವ ಮದುವೆ ಸಮಾರಂಭದಭದಲ್ಲಿ ಪಾಲ್ಗೊಳ್ಳಲೆಂದು ಇವರು ಬೆಂಗಳೂರಿನಿಂದ ಬಂದಿದ್ದರು. ಸಮುದ್ರದ ಅಲೆಗೆ ಕೊಚ್ಚಿಹೋದ ದುರ್ದೈವಿ ಯುವಕರು ಸಂತೋಷ (23) ಅಜೇಯ(22) ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಸಂತೋಷ್ ನ ಮೃತದೇಹ ಪತ್ತೆಯಾಗಿದ್ದು ಇನ್ನೋರ್ವ ಅಜೇಯ್‌ಗಾಗಿ ಹುಡುಕಾಟ ನಡೆಯುತ್ತಿದೆ. ಮದುವೆ ಕಾರ್ಯಕ್ರಮಕ್ಕೆಂದು ಇಬ್ಬರು ಬೆಂಗಳೂರಿನಿಂದ ಕುಂದಾಪುರಕ್ಕೆ ಬಂದಿದ್ದು ಬೀಜಾಡಿ ಬೀಚ್ ಪಕ್ಕದ ರೆಸಾರ್ಟ್ ವೊಂದರಲ್ಲಿ ಉಳಿದುಕೊಂಡಿದ್ದರು ಎನ್ನಲಾಗಿದೆ. ಶನಿವಾರ ಬೆಳಿಗ್ಗೆ ಸ್ನೇಹಿತರೊಂದಿಗೆ ಸಮುದ್ರದಲ್ಲಿ ಈಜಲು ತೆರಳಿದ ವೇಳೆ ಇಬ್ಬರು ಸಮುದ್ರದ ಅಲೆಗೆ ಸಿಲುಕಿ ನೀರುಪಾಲಾಗಿದ್ದಾರೆ. ಮಾಹಿತಿ ತಿಳಿದ ತಕ್ಷಣ ಸ್ಥಳೀಯರು ಸಂತೋಷ್ ನನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿರುತ್ತಾರೆ. ಇನ್ನೋರ್ವ ಕುಂದಾಪುರದ ಆನಗಳ್ಳಿ ಅಜೇಯ್ ಗಾಗಿ ಹುಡುಕಾಟ ನಡೆಯುತ್ತಿದೆ. ಸ್ಥಳಕ್ಕೆ ಕುಂದಾಪುರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Exit mobile version