Home ಅಪರಾಧ ಮಕ್ಕಳನ್ನು ಕೊಂದು ತಂದೆ ಆತ್ಮಹತ್ಯೆ

ಮಕ್ಕಳನ್ನು ಕೊಂದು ತಂದೆ ಆತ್ಮಹತ್ಯೆ

0

ಗದಗ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮೂರು ಮಕ್ಕಳನ್ನು ತುಂಗಭದ್ರಾ ನದಿಗೆ ಎಸೆದು, ತಂದೆಯೂ ನದಿಯಲ್ಲಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಗದಗ ಜಿಲ್ಲೆಯ ಕೊರ್ಲಹಳ್ಳಿ ಬಳಿ ತುಂಗಭದ್ರಾ ನದಿಯಲ್ಲಿ ನಡೆದಿದೆ. ಮುಂಡರಗಿ ತಾಲೂಕ ಮಕ್ತುಂಪೂರ ನಿವಾಸಿ ಮಂಜುನಾಥ ಅರಕೇರಿ ತನ್ನ ಮೂವರು ಮಕ್ಕಳನ್ನು ನದಿಯಲ್ಲಿ ಎಸೆದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾರೆ. ಮಕ್ಕಳನ್ನು ವೇದಾಂತ(೩), ಪವನ(೪) ಹಾಗೂ ಧನ್ಯಾ(೬) ಎಂದು ಗುರುತಿಸಲಾಗಿದೆ.

Exit mobile version