Home ತಾಜಾ ಸುದ್ದಿ ಮಂಕುತಿಮ್ಮನ ಕಗ್ಗ ಟ್ರೈಲರ್‌ ಅನಾವರಣ

ಮಂಕುತಿಮ್ಮನ ಕಗ್ಗ ಟ್ರೈಲರ್‌ ಅನಾವರಣ

0

ಬೆಂಗಳೂರು: ಡಿವಿಜಿ ಅವರ ಜೀವನಾಧಾರಿತವಾಗಿರುವ “ಮಂಕು ತಿಮ್ಮನ ಕಗ್ಗ” ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ಈ ಚಿತ್ರದ ಕಥೆ ವಿಸ್ತರಣೆ, ಚಿತ್ರಕಥೆ ಹಾಗೂ ಸಂಭಾಷಣೆ ನಿರ್ದೇಶಕ ರಾಜ ರವಿಶಂಕರ್ ಅವರದು. ಎನ್ ಎ ಶಿವಕುಮಾರ್ ನಿರ್ಮಿಸಿರುವ ಹಾಗೂ ಮೀನಾ ಶಿವಕುಮಾರ್ ಸಹ ನಿರ್ಮಾಣವಿದ್ದು, ಎ.ಟಿ. ರವೀಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಚಿತ್ರ ತೆರೆಗೆ ಬರಲು ಸಿದ್ದವಾಗಿದ್ದು, ಮಧುಗಿರಿ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಸಿ. ನಾರಾಯಣ್ ಛಾಯಾಗ್ರಹಣ ಹಾಗೂ ಆರ್ ಡಿ ರವಿ ಸಂಕಲನ (ದೊರೈರಾಜ್) ಈ ಚಿತ್ರಕ್ಕಿದೆ. ತಿಮ್ಮಣ್ಣ ಮೇಷ್ಟ್ರು ಪಾತ್ರದಲ್ಲಿ ಹಿರಿಯ ನಟ ರಾಮಕೃಷ್ಣ, ಬಾಲಕ ಸೋಮಿ (ಡಿ.ವಿ.ಜಿ) ಅವರ ಪಾತ್ರದಲ್ಲಿ ಮಾಸ್ಟರ್ ರಣವೀರ್, ಅಲಮೇಲು ಪಾತ್ರದಲ್ಲಿ ಭವ್ಯಶ್ರೀ ರೈ, ವೆಂಕರಮಣಯ್ಯ ಪಾತ್ರದಲ್ಲಿ ರವಿನಾರಾಯಣ್ ಹಾಗೂ ಅಜ್ಜಿಯ ಪಾತ್ರದಲ್ಲಿ ಲಕ್ಷ್ಮೀ ನಾಡಗೌಡ ಅಭಿನಯಿಸಿದ್ದಾರೆ. ಸಾಯಿಪ್ರಕಾಶ್, ನರಸೇಗೌಡ, ಶ್ರೀನಿವಾಸ್ ಕೆಸ್ತೂರ್ ನಟಿಸಿದ್ದಾರೆ.

Mankuthimmana Kagga Official Trailer | Ramakrishna | Raja Ravishankar (V. Ravi) | A2 Music

Exit mobile version