Home ಅಪರಾಧ ಬ್ಯಾಂಕ್‌ಗೆ ಲಕ್ಷಾಂತರ ರೂ. ವಂಚನೆ: ೧೨ ಜನರ ವಿರುದ್ಧ ಎಫ್‌ಐಆರ್

ಬ್ಯಾಂಕ್‌ಗೆ ಲಕ್ಷಾಂತರ ರೂ. ವಂಚನೆ: ೧೨ ಜನರ ವಿರುದ್ಧ ಎಫ್‌ಐಆರ್

0

ಬಳ್ಳಾರಿ: ನಕಲಿ ದಾಖಲೆಗಳನ್ನು ಸಲ್ಲಿಸಿ ‘ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ’ದ ಅಡಿ ಸಾಲ ಪಡೆದು ವಂಚನೆ ಮಾಡಿರುವ ಆರೋಪದ ಮೇಲೆ ಬ್ಯಾಂಕ್ ಆಫ್ ಬರೋಡಾ ೧೨ ಜನರ ವಿರುದ್ಧ ನಗರದ ಬ್ರೂಸ್‌ಪೇಟೆ ಠಾಣೆಯಲ್ಲಿ ದೂರು ದಾಖಲಿಸಿದೆ.
ರವಿ, ಭಾರತಿ, ಖಾದರ್ ಭಾಷ, ರಾಮಮೂರ್ತಿ, ಮಾರೇಶ್, ಹುಲುಗಪ್ಪ, ಹನುಮಪ್ಪ, ಸಾಯಿ ಸಚಿನ್, ಬಸವರಾಜ, ಸಜ್ಜಿದ ಪರ್ವಿನ್ ಮತ್ತು ಈರಮ್ಮ ಅವರು ಪ್ರತ್ಯೇಕವಾಗಿ ಒಟ್ಟು ೭೦.೭೬ ಲಕ್ಷ ರೂ. ಸಾಲ ಪಡೆದು, ಉದ್ದಿಮೆ ಆರಂಭಿಸದೆ ವಂಚಿಸಿರುವುದಾಗಿ ಬ್ಯಾಂಕ್ ಅಧಿಕಾರಿಗಳು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
‘ಜೀನ್ಸ್ ಟೈಲರ್ ಮಷಿನ್ ಪ್ಲಾಂಟ್’ ಸ್ಥಾಪಿಸುವುದಾಗಿ, ‘ಪೇಪರ್ ಮೇಕಿಂಗ್’ಯಂತ್ರ ಖರೀದಿ ಮಾಡುವುದಾಗಿ ಹಾಗೂ ಕಾಂಕ್ರಿಟ್ ಸೆಂಟ್ರಿಂಗ್’ ವಸ್ತುಗಳನ್ನು ಖರೀದಿಸುವುದಾಗಿ ಬ್ಯಾಂಕ್‌ಗೆಈಶ್ವರ್ ಎಂಟರ್‌ಪ್ರೈಸಸ್’, `ಮಂಜುಳ ಎಂಟರ್‌ಪ್ರೈಸಸ್’ ಮತ್ತು ಇತರ ಕಂಪನಿಗಳ ಹೆಸರಿನಲ್ಲಿ ನಕಲಿ ಕೊಟೇಷನ್ ಮತ್ತು ನಕಲಿ ದಾಖಲಾತಿಗಳನ್ನು ನೀಡಲಾಗಿತ್ತು ಎಂದು ಬ್ಯಾಂಕ್ ಆರೋಪಿಸಿದೆ.
ಬ್ಯಾಂಕಿನಲ್ಲಿ ತಾತ್ಕಾಲಿಕವಾಗಿ ಕೆಲಸ ಮಾಡಿಕೊಂಡಿದ್ದ ಬಿ. ನಾಗರಾಜ ಎಂಬುವವರ ಮೂಲಕ ಇವರು ನಕಲಿ ದಾಖಲೆ ಸಲ್ಲಿಸಿದ್ದರು ಎಂದು ಆರೋಪಿಸಲಾಗಿದೆ. ಒಟ್ಟು ೧೨ ಮಂದಿ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಲಾಗಿದೆ.

Exit mobile version