Home ತಾಜಾ ಸುದ್ದಿ ಬೃಂದಾವನದ ಸೊಬಗು ನೊಡಲು ಬಂದ 5 ಜನಕ್ಕೆ ಕಚ್ಚಿದ ನಾಯಿ

ಬೃಂದಾವನದ ಸೊಬಗು ನೊಡಲು ಬಂದ 5 ಜನಕ್ಕೆ ಕಚ್ಚಿದ ನಾಯಿ

0

ಶ್ರೀರಂಗಪಟ್ಟಣ: ಚಿರತೆ ಪ್ರತ್ಯಕ್ಷ ಬಳಿಕ KRSನಲ್ಲಿ ಪ್ರವಾಸಿಗರಿಗೆ ನಾಯಿ ಕಂಟಕ ಎದುರಾಗಿದೆ. ಭಾನುವಾರ ರಾತ್ರಿ KRSನ ಬೃಂದಾವನದಲ್ಲಿ ಈ ಘಟನೆ ನಡೆದಿದ್ದು, ಸುಮಾರು 5 ಮಂದಿ ಪ್ರವಾಸಿಗರಿಗೆ ನಾಯಿ ಕಚ್ಚಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ವೀಕೆಂಡ್ ಹಿನ್ನೆಲೆ ನಿನ್ನೆ KRS ವೀಕ್ಷಣೆಗೆ ಹೆಚ್ಚಿನ ಪ್ರವಾಸಿಗರು‌ ಆಗಮಿಸಿದ್ದು, ಇಲ್ಲಿನ ಧ್ವನಿ ಬೆಳಕು ಕಾರಂಜಿ ನೋಡುತ್ತಿದ್ದ ವೇಳೆ ಏಕಾಏಕಿ ಪ್ರವಾಸಿಗರತ್ತ ನಾಯಿಯೊಂದು ನುಗ್ಗಿ ಸಿಕ್ಕ ಸಿಕ್ಕವರನ್ನು ಕಚ್ಚಿದೆ.
ನಾಯಿ ದಾಳಿಯಿಂದ ಪ್ರವಾಸಿಗರು ದಿಕ್ಕೆಟ್ಟು ಓಡಿದ್ದು, ನಾಯಿ ಅವಂತಾರದಿಂದ ಪ್ರವಾಸಿಗರನ್ನು ಅರ್ಧಕ್ಕೆ ಹೊರಕ್ಕೆ ಕಳುಹಿಸಲಾಯಿತು. ಪೊಲೀಸರು ಹಾಗೂ ಸಿಬ್ಬಂದಿ ನಾಯಿ ಓಡಿಸುವ ಪ್ರಯತ್ನದಲ್ಲಿ‌ ಮುಳುಗಿದ್ದಾರೆ.

Exit mobile version