ಬಾಗಲಕೋಟೆ: ವಿಧಾನಸಭೆ ಸರ್ವಾತ್ರಿಕ ಚುನಾವಣೆಗೆ ಮತದಾನ ಆರಂಭಕ್ಕೂ ಮುನ್ನ ವಿರೋಧಿಗಳನ್ನು ಮಣಿಸಲು ಕೆಲಸ ಅಭ್ಯರ್ಥಿಗಳು ವಾಮಾಚಾರದ ಮೊರೆ ಹೋಗಿರುವ ಗಂಭೀರ ಆರೋಪ ಕೇಳಿ ಬಂದಿದೆ.
ಮುಧೋಳ ಕ್ಷೇತ್ರದಲ್ಲಿ ಗೋವಿಂದ ಕಾರಜೋಳರಿಗೆ ಮತಗಳು ಬಾರದಂತೆ ವಾಮಾಚಾರ ಮಾಡಿಸಿರುವ ಆರೋಪ ಕೇಳಿ ಬಂದಿದ್ದು, ಚೀಲದಲ್ಲಿ ವಾಮಾಚಾರದ ವಸ್ತುಗಳನ್ನು ಹೊತ್ತು ಬಂದವರನ್ನು ಗ್ರಾಮಸ್ಥರು ಹಿಡಿದು ತರಾಟೆಗೆ ತೆಗೆದುಕೊಂಡಿರುವ ವರದಿಯಾಗಿದೆ.ಹಲವು ಗ್ರಾಮಗಳಲ್ಲಿ ಈ ರೀತಿ ಘಟನೆ ವರದಿಯಾಗಿವೆ.