Home ತಾಜಾ ಸುದ್ದಿ ಬಳ್ಳಾರಿ ಸೆಂಟ್ರಲ್ ಜೈಲಿಗೆ ಹೆಚ್ಚುವರಿ ೧೦ ಸಿಸಿ ಕ್ಯಾಮೆರಾ

ಬಳ್ಳಾರಿ ಸೆಂಟ್ರಲ್ ಜೈಲಿಗೆ ಹೆಚ್ಚುವರಿ ೧೦ ಸಿಸಿ ಕ್ಯಾಮೆರಾ

0

ಬಳ್ಳಾರಿ: ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ನಟ ದರ್ಶನ್‌ ಬಂಧಿ ಹಿನ್ನಲೆಯಲ್ಲಿ ಜೈಲು ಒಳ ಮತ್ತು ಹೊರ ಆವರಣದಲ್ಲಿ ಹೆಚ್ಚುವರಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗುತ್ತಿದೆ.
ಭದ್ರತೆಗಾಗಿ ಮತ್ತಷ್ಟು ಸಿಸಿ ಕ್ಯಾಮೆರಾ ಆಳವಡಿಕೆಗೆ ಜೈಲಿನ ಅಧಿಕಾರಿಗಳು ಮುಂದಾಗಿದ್ದಾರೆ.
ಬಳ್ಳಾರಿಯ ಈಡೀ ಸೆಂಟ್ರಲ್ ಜೈಲುಗೆ ಈಗ ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಆಪರೇಟ್ ಆಗುತ್ತಿದೆ. ಈಗಾಗಲೇ ಜೈಲಿನಲ್ಲಿ ಒಟ್ಟು 55 ಸಿಸಿ ಕ್ಯಾಮೆರಾಗಳಿದ್ದು,
ಈಗ 10 ಕ್ಯಾಮೆರಾ ಹೆಚ್ಚುವರಿ ಅಳವಡಿಸುವ ಕಾರ್ಯ ನಡೆದಿದೆ. ಜೈಲು ಪ್ರವೇಶದ ಮುಖ್ಯ ದ್ವಾರದ ಬಳಿ, ಮಾಧ್ಯಮದವರು ನಿಲ್ಲುವ ಪ್ರದೇಶದಲ್ಲೂ ಹೆಚ್ಚುವರಿ ಕ್ಯಾಮೆರಾ ಅಳವಡಿಸಲಾಗುತ್ತಿದೆ.

Exit mobile version