Home ತಾಜಾ ಸುದ್ದಿ ಪ್ರಧಾನಿ ಆಪ್ತ ಕಾರ್ಯದರ್ಶಿಯಾಗಿ ನಿಧಿ ತಿವಾರಿ ನೇಮಕ

ಪ್ರಧಾನಿ ಆಪ್ತ ಕಾರ್ಯದರ್ಶಿಯಾಗಿ ನಿಧಿ ತಿವಾರಿ ನೇಮಕ

0

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ ಕಾರ್ಯದರ್ಶಿಯಾಗಿ ನಿಧಿ ತಿವಾರಿ ಅವರನ್ನು ನೇಮಿಕ ಮಾಡಲಾಗಿದೆ.
ಅವರ ನೇಮಕಾತಿಯನ್ನು ಸಂಪುಟದ ನೇಮಕಾತಿ ಸಮಿತಿ ಅನುಮೋದಿಸಿದೆ. ಉತ್ತರ ಪ್ರದೇಶದ ವಾರಣಾಸಿಯ ಮೂಲದ ತಿವಾರಿ, ನವೆಂಬರ್ 2022 ರಿಂದ ಪ್ರಧಾನ ಮಂತ್ರಿ ಕಚೇರಿಯಲ್ಲಿ (ಪಿಎಂಒ) ಸೇವೆ ಸಲ್ಲಿಸುತ್ತಿದ್ದಾರೆ. ಅವರು ಮೊದಲು ಪಿಎಂಒಗೆ ಅಂಡರ್ ಸೆಕ್ರೆಟರಿಯಾಗಿ ಸೇರಿದರು ಮತ್ತು ನಂತರ ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಪಿಎಂಒನಲ್ಲಿ ಕಾರ್ಯನಿರ್ವಹಿಸುವ ಮೊದಲು, ಅವರು ವಿದೇಶಾಂಗ ಸಚಿವಾಲಯದಲ್ಲಿ (ಎಂಇಎ) ಪ್ರಮುಖ ಪಾತ್ರ ವಹಿಸಿದರು, ನಿಶ್ಯಸ್ತ್ರೀಕರಣ ಮತ್ತು ಅಂತರರಾಷ್ಟ್ರೀಯ ಭದ್ರತಾ ವ್ಯವಹಾರಗಳಲ್ಲಿ ಪರಿಣತಿ ಹೊಂದಿದ್ದರು. ನಾಗರಿಕ ಸೇವಾ ಪರೀಕ್ಷೆಯಲ್ಲಿ (2013) 96 ನೇ ರ‍್ಯಾಂಕ್ ಗಳಿಸಿದ ತಿವಾರಿ, ಐಎಫ್‌ಎಸ್ ಅಧಿಕಾರಿಯಾದ ಇವರು 2014ರ ಬ್ಯಾಚ್‌ನ ಭಾರತೀಯ ವಿದೇಶಾಂಗ ಸೇವೆ ( ಐಎಫ್‌ಎಸ್ ) ಅಧಿಕಾರಿಯಾಗಿದ್ದು, ಪ್ರಸ್ತುತ ಪ್ರಧಾನ ಮಂತ್ರಿ ಕಚೇರಿಯಲ್ಲಿ (ಪಿಎಂಒ) ಉಪ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Exit mobile version