ಯಾದಗಿರಿ: ಪಿಎಸ್ಐ ಪರಶುರಾಮ ಅನುಮಾನಾಸ್ಪದ ಸಾವಿನ ಪ್ರಕರಣದ ಸಿಐಡಿ ತನಿಖೆ ಚುರುಕುಗೊಂಡಿದೆ.
ಇಂದು ಯಾದಗಿರಿಗೆ ಆಗಮಿಸಿದ ಸಿಐಡಿ ಅಧಿಕಾರಿಗಳ ತಂಡ ಇಲ್ಲಿನ ಡಿಎಸ್ಪಿ ಕಚೇರಿಗೆ ಭೇಟಿ ನೀಡಿತು. ಮೃತ ಪಿಎಸ್ಐ ತಂದೆ ಮತ್ತು ಮಾವನ ಜೊತೆಗೆ ಪಿಎಸ್ಐ ವಾಸವಾಗಿದ್ದ ಪೊಲೀಸ್ ಕ್ವಾಟರ್ಸಗೆ ಸಿಐಡಿ ಅಧಿಕಾರಿಗಳ ತಂಡ ಭೇಟಿ ನೀಡಿ ಮನೆ ಶೋಧ ಮಾಡಿ, ಸ್ಥಳ ಮಹಜರ ಮಾಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ಡಿಎಸ್ಪಿ ಹಾಗು ಇತರೆ ಪೊಲಿಸ್ ಅಧಿಕಾರಿಗಳಿದ್ದರು.
ಇದಕ್ಕೂ ಮುಂಚೆ ಡಿವೈಎಸ್ಪಿ ಕಚೇರಿಯಲ್ಲಿ ಮಹತ್ವದ ಮಾಹಿತಿ ಪಡೆದ ಸಿಐಡಿ ಸಿಬ್ಬಂದಿ ಪ್ರಿಂಟರ್, ಲ್ಯಾಪ್ ಟಾಪ್, ಮತ್ತು ಹ್ಯಾಂಡ್ ಕ್ಯಾಮೆರಾ ಕೊಂಡೊಯ್ದರು