Home ತಾಜಾ ಸುದ್ದಿ ನಾನು ಜಿಗಣಿ ಇದ್ದಂತೆ, ರಕ್ತ ಬರುವವರೆಗೂ ಬಿಡುವುದಿಲ್ಲ

ನಾನು ಜಿಗಣಿ ಇದ್ದಂತೆ, ರಕ್ತ ಬರುವವರೆಗೂ ಬಿಡುವುದಿಲ್ಲ

0

ವಿಜಯಪುರ: ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಪೂರ್ಣಗೊಳಿಸದೆ ಅದನ್ನು ಬಿಡುವುದಿಲ್ಲ, ನಾನು ಜಿಗಣಿ ಇದ್ದಂತೆ, ಹಿಡಿದರೆ ರಕ್ತ ಬರುವತನಕ ಬಿಡುವುದಿಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ವಿಜಯಪುರ ನೂತನ ರೈಲು ನಿಲ್ದಾಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿಗೆ ನಾನು ಬಹಳಷ್ಟು ಶ್ರಮಿಸಿದ್ದೇನೆ. ಕೆಲವರು ವಿಜಯಪುರ ವಿಮಾನ ನಿಲ್ದಾಣವನ್ನು ಬೇರೆಡೆಗೆ ಸ್ಥಳಾಂತರಿಸಲು ನೋಡಿದರು ಆದರೆ ನಾನು ಜಿಗಣಿ ಇದ್ದಂತೆ ಹಿಡಿದ ಕೆಲಸ ಬಿಡುವುದಿಲ್ಲ. ಹೀಗಾಗಿ ವಿಮಾನ ನಿಲ್ದಾಣ ಅತೀ ಶೀಘ್ರವಾಗಿ ವಿಜಯಪುರದಲ್ಲೇ ನಿರ್ಮಾಣವಾಗುವಂತೆ ಮಾಡಿದೆ ಎಂದರು.

Exit mobile version