Home ನಮ್ಮ ಜಿಲ್ಲೆ ನಟ ನೀನಾಸಂ ಅಶ್ವಥ್ ಬಂಧನ

ನಟ ನೀನಾಸಂ ಅಶ್ವಥ್ ಬಂಧನ

0

ಹಾಸನ: ಕನ್ನಡದ ನಾಯಕ ನಟ ನಿನಾಸಂ ಅಶ್ವಥ್‌ ಅವರನ್ನು ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ಅರೆಸ್ಟ್‌ ಮಾಡಲಾಗಿದೆ. ಹಾಸನ ಪೋಲಿಸರು ನಿನ್ನೆ ರಾತ್ರಿ ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಇನ್ನು ಈ ವಿಚಾರ ತಡವಾಗಿ ಹೊರಬಿದ್ದಿದೆ.
ಪ್ರಕರಣದಲ್ಲಿ ನಿನಾಸಂ ಅಶ್ವಥ್‌ ವಿರುದ್ಧ ನಾಲ್ಕು ಬಾರಿ ಅರೆಸ್ಟ್‌ ವಾರಂಟ್‌ ಹೊರಡಿಸಲಾಗಿತ್ತು. ಆದರೆ ಅದರಿಂದ ಯಾವ ಪ್ರಯೋಜನವೂ ಆಗಿರಲಿಲ್ಲ. ನಾಲ್ಕು ಬಾರಿಯೂ ಕೋರ್ಟ್‌ಗೆ ಹಾಜರಾಗದೆ ಇರುವ ಕಾರಣ ಐದನೇ ಬಾರಿ ಅರೆಸ್ಟ್‌ ವಾರಂಟ್‌ ಇರುವ ಹಿನ್ನಲೆಯಲ್ಲಿ ಹಾಸನ ಬಡಾವಣೆ ಠಾಣೆ ಪೊಲೀಸರು ನಟನನ್ನು ಬಂದಿಸಿದ್ದಾರೆ. ನ್ಯಾಯಾಧೀಶರ ಮುಂದೆ ನೀನಾಸಂ ಅಶ್ವಥ್ ತಪ್ಪೊಪ್ಪಿಕೊಂಡಿದ್ದು ಶೇ.25 ರಷ್ಟು ಹಣ ಪಾವತಿಸಿದ್ದಾರೆ. ಇನ್ನುಳಿದ ಹಣ ಶೀಘ್ರದಲ್ಲೇ ನೀಡುವುದಾಗಿ ಹೇಳಿದ್ದಾರೆ. ಶೇಕಡಾ 25 ರಷ್ಟು ಹಣ ಪಾವತಿ ಹಿನ್ನೆಲೆಯಲ್ಲಿ ಜಾಮೀನಿನ ಮೇಲೆ ಅಶ್ವಥ್ ಬಿಡುಗಡೆ ಮಾಡಲಾಗಿದೆ.

Exit mobile version